Urdu   /   English   /   Nawayathi

ವಿಡಿಯೋ: ರೈಲ್ವೇ ಪೊಲೀಸ್ ಸಿಬ್ಬಂದಿಯ ಸಾಹಸದಿಂದ ಬದುಕುಳಿದ ಪ್ರಯಾಣಿಕ!

share with us

ಚೆನ್ನೈ: 14 ನವೆಂಬರ್ (ಫಿಕ್ರೋಖಬರ್ ಸುದ್ದಿ) ರೈಲ್ವೇ ಸಿಬ್ಬಂದಿಯ ಸಾಹಸ ಮತ್ತು ಸಮಯ ಪ್ರಜ್ಞೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದ ರೈಲು ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಎಗ್ಮೋರ್ ರೈಲು ನಿಲ್ದಾಣದಲ್ಲಿ ಸೋಮವಾರದಂದು ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಎಗ್ಮೋರ್ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲುಹೋದ ಪ್ರಯಾಣಿಕನೋರ್ವ ಆಯತಪ್ಪಿ ಬೀಳುವ ಹಂತಕ್ಕೆ ಬಂದಿದ್ದ. ರೈಲಿನ ಕಂಬಿ ಹಿಡಿದು ನೇತಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ರೈಲ್ವೇ ಸುರಕ್ಷತಾ ಸಿಬ್ಬಂದಿ ಕೂಡಲೇ ಆತನನ್ನು ಹೊರಗೆ ಎಳೆದುಕೊಂಡರು. ಸಿಬ್ಬಂದಿ ಕೊಂಚ ತಡ ಮಾಡಿದ್ದರೂ ಆತ ಕೆಳಗೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ಆದರೆ ಸಿಬ್ಬಂದಿಯ ಸಮಯ ಪ್ರಜ್ಞೆ ಮತ್ತು ಸಾಹಸದಿಂದಾಗಿ ಸಂಭವಿಸಬಹುದಾದ ದುರಂತವೊಂದು ತಪ್ಪಿದಂತಾಗಿದೆ. ಇವಿಷ್ಟೂ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

Embedded video

ANI✔@ANI

: Railway Protection Force (RPF) personnel saved a passenger's life by rescuing him from falling, while he was boarding a train at Egmore Railway Station's platform. The passenger didn't suffer any injury. (12.11.18)

457

10:31 AM - Nov 14, 2018

149 people are talking about this

https://www.youtube.com/watch?v=6Ruk6hdilAQ

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا