Urdu   /   English   /   Nawayathi

ಶಾರ್ಟ್ ಸಕ್ರ್ಯೂಟಿನಿಂದ ಮನೆ ಸುಟ್ಟು, ಮಹಿಳೆ ಸಜೀವ ದಹನ

share with us

ಬಂಟ್ವಾಳ: 29 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಬಂಟ್ವಾಳ ತಾಲೂಕಿನಲ್ಲಿ ಶನಿವಾರದಂದು ರಾತ್ರಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆದ ಕಾರಣ ಮಹಿಳೆಯೊಂದು ಸಜೀವ ದಹನಗೊಂಡಿದ್ದಾಳೆ ಎನ್ನಲಾಗಿದೆ. ಮೃತಪಟ್ಟ ಮಹಿಳೆ ಬಂಟ್ವಾಳ ತಾಲೂಕಿನ ಕಾವಳ ಮಡೂರು ಗ್ರಾಮದವಳು ರೇವತಿ(40) ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ ಆದ ಮಳೆಯಲ್ಲಿ ಈಕೆಯ ಮನೆಗೆ ಸಿಡಿಲು ಬಡಿದು ಮನೆಯಲ್ಲಿ ವಾಸಿಸಲು ಆಗದ ಕಾರಣ ರೇವತಿಯವರು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಶನಿವಾರದಂದು ತಮ್ಮ ಮನೆಗೆ ಮರಳಿದ್ದರು ಎಂದು ತಿಳಿದು ಬಂದಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಮನೆಯಲ್ಲಿ ಶೇಖರಿಸಿಟ್ಟ ಕಟ್ಟಿಗೆಗಳಿಗೆ ಬೆಂಕಿ ತಗುಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬೆಂಕಿ ಹತ್ತಿ ಉರಿಯುವುದನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಬೆಂಕಿ ನಂದಿಸಿದರೂ ಆಕೆಯನ್ನು ಉಳಿಸಲು ಆಗಲಿಲ್ಲ ಎಂದು ಹೇಳಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا