Urdu   /   English   /   Nawayathi

ಶೀಘ್ರದಲ್ಲೇ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ

share with us

ಬೆಂಗಳೂರು: 16 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ನಗರದ ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ನಗರ ಜಿಲ್ಲಾಧಿಕಾರಿ ವಿಜಯ್‍ಶಂಕರ್ ತಿಳಿಸಿದರು. ಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆಗಳ ಬಳಿ ಮಾರ್ಕಿಂಗ್ ಮಾಡಿರುವ ಜಾಗವನ್ನು ಸ್ಥಳೀಯರು ಅಳಿಸಿ ಹಾಕುತ್ತಿದ್ದಾರೆ. ಒತ್ತುವರಿ ತೆರವು ಮುಗಿಯುವವರೆಗೂ ಸರ್ವೆ ಅಧಿಕಾರಿಗಳು ಜತೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ನಗರದ ಸುಮಾರು 10 ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ. ನಗರದ ಕೆರೆಗಳಿಗೆ ಕೈಗಾರಿಕೆಗಳು ಮತ್ತಿತರೆಡೆಯಿಂದ ಕೊಳಚೆ ನೀರು ಸೇರುತ್ತಿದೆ. ಈಗಾಗಲೇ ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಜತೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.ಈಗಾಗಲೇ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಎರಡು ಸಭೆ ನಡೆಸಲಾಗಿದೆ ಎಂದರು.

ಮೊದಲ ಹಂತದಲ್ಲಿ 10 ಕಲುಷಿತ ಕೆರೆಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಕೆರೆ ನಿರ್ವಹಣೆ ಹೊತ್ತಿರುವ ಬಿಡಿಎ, ಬಿಬಿಎಂಪಿ ಮತ್ತಿತರ ಇಲಾಖೆಗಳಲ್ಲಿನ ನಿಧಿ ಬಳಸಿ ಒಂದು ಸಾಮಾನ್ಯ ಸಮಿತಿ ರಚಿಸಿ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಇದಕ್ಕಾಗಿ ಕಾರ್ಯನಿರ್ವಹಣಾ ಯೋಜನೆ ತಯಾರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಮತ್ತೆ ಮುಂದುವರಿಸಲಾಗುವುದು. ರಾಜಕಾಲುವೆ ಬಳಿ ಮಾರ್ಕಿಂಗ್ ಆಗಿರುವ ಜಾಗವನ್ನು ಸ್ಥಳೀಯರು ಅಳಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಲಾಗುವುದು ಎಂದು ವಿಜಯ್‍ಶಂಕರ್ ತಿಳಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا