Urdu   /   English   /   Nawayathi

ಇಂಜಿನ್‌ ರಹಿತ ರೈಲು ಸಿದ್ಧ

share with us

ನವದೆಹಲಿ: 14 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ದೇಶದ ಪ್ರಥಮ ಇಂಜಿನ್‌ ರಹಿತ ರೈಲು ಬಹುತೇಕ ಸಿದ್ಧವಾಗಿದೆ! ಇದರ ಒಳಭಾಗದ ವಿನ್ಯಾಸ ಈಗ ಬಹಿರಂಗಗೊಂಡಿದ್ದು, ಮುಂದಿನ ಜನವರಿಯಿಂದ ದೆಹಲಿ- ಭೋಪಾಲ್‌ ಮಾರ್ಗದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ ಬದಲಿಗೆ ಟ್ರೇನ್‌ 18 ಎಂಬ ಹೆಸರಿನ ಈ ರೈಲು ಪ್ರಯಾಣಿಸಲಿದೆ.

ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ರೈಲು ಶೀಘ್ರದಲ್ಲೇ ತಪಾಸಣೆಗೆ ಒಳಪಡಲಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಅತ್ಯಂತ ಕಡಿಮ ಅವಧಿಯಲ್ಲಿ ಅಂದರೆ 20 ತಿಂಗಳಲ್ಲಿ ಇದನ್ನು ತಯಾರಿಸಲಾಗಿದೆ. ವಿನ್ಯಾಸದಿಂದ ಉತ್ಪಾದನೆಯವರೆಗೂ ಕೇವಲ 20 ತಿಂಗಳಲ್ಲಿ ಮುಗಿಸಲಾಗಿದೆ. ಚೆನ್ನೈನ ಇಂಟಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ಇದು ತಯಾರಾಗಿದ್ದು, ಸಂಪೂರ್ಣ ಏರ್‌ ಕಂಡೀಷನ್‌ ಇರಲಿದೆ. 16 ಕೋಚ್‌ಗಳ ಈ ರೈಲು ಎಕ್ಸಿಕ್ಯೂಟಿವ್‌ ಹಾಗೂ ನಾನ್‌ ಎಕ್ಸಿಕ್ಯೂಟಿವ್‌ ಎಂಬ ವಿಭಾಗಗಳನ್ನು ಹೊಂದಿರಲಿದೆ. ಈ ರೈಲಿನಲ್ಲಿ ಸೀಟ್‌ಗಳನ್ನು ಯಾವ ದಿಕ್ಕಿಗೆ ಬೇಕಾದರೂ ತಿರುಗಿಸಬಹುದಾಗಿದ್ದು, ಹಲವು ಜನ ಒಟ್ಟಿಗೆ ಪ್ರಯಾಣಿಸುವುದಾದರೆ ಅನುಕೂಲ ಕರವಾಗಿದೆ.

ಎಲ್‌ಇಡಿ ಲೈಟ್‌ಗಳು, ಸಾಮಗ್ರಿ ಇಡಲು ದೊಡ್ಡದಾದ ರ್ಯಾಕ್‌ಗಳು, ಬಯೋ ವ್ಯಾಕ್ಯೂಮ್‌ ಟಾಯ್ಲೆಟ್‌ಗಳು ಅಂಗವಿಕಲರಿಗೆ ಅನುಕೂಲಕರವಾದ ವ್ಯವಸ್ಥೆ, ಪ್ರತಿಯೊಬ್ಬರಿಗೂ ಓದುವುದಕ್ಕಾಗಿ ಲೈಟ್‌ಗಳು ಹಾಗೂ ಮೊಬೈಲ್‌ ಚಾರ್ಜಿಂಗ್‌ ವ್ಯವಸ್ಥೆ ಸೇರಿದಂತೆ ಹಲವು ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا