Urdu   /   English   /   Nawayathi

ಉಗ್ರರಿಗೆ ಆರ್ಥಿಕ ನೆರವು ಒದಗಿಸುತ್ತಿದ್ದ ಮೂವರ ಬಂಧನ

share with us

ನವದೆಹಲಿ: 27 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕುಪ್ರಸಿದ್ದ ಭಯೋತ್ಪಾದಕ ಹಪೀಜ್ ಸಯೀದ್ ನೇತೃತ್ವದ ಉಗ್ರಗಾಮಿ ಸಂಘಟನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ರಾಜಧಾನಿ ದೆಹಲಿಯಲ್ಲಿ ಪತ್ತೆ ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ), ಈ ಸಂಬಂಧ ಮೂವರನ್ನು ಬಂಧಿಸಿದೆ. ಜ ಮಾತ್-ಉದ್-ದವಾ ಮುಖ್ಯಸ್ಥ ಹಪೀಜ್ ಸಹೀದ್‍ನ ಫಲಾಹ್-ಎ-ಇನ್ಸಾನಿಯತ್ ಫೌಂಡೇಷನ್(ಎಫ್‍ಐಎಫ್) ಸಂಸ್ಥೆಗೆ ದೆಹಲಿಯ ವಿವಿಧ ಸ್ಥಳಗಳಿಂದ ಗೋಪ್ಯವಾಗಿ ಹಣಕಾಸು ನೆರವು ಒದಗಿಸುತ್ತಿದ್ದಜಾಲವನ್ನು ಎನ್‍ಐಎ ಅಧಿಕಾರಿಗಳು ಭೇದಿಸಿದ್ದಾರೆ. ನಂತರ ದರ್ಯಾಗಂಜ್, ನಿಜಾಮುದ್ಧಿನ್ ಮತ್ತು ಕುಚಾ ಘಸೀರಮ್ ಪ್ರದೇಶಗಳ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ.

ಭಯೋತ್ಪಾದನೆ ಸಂಘಟನೆಗಳಿಗೆ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಮತ್ತು ವಿವಿಧ ಮೂಲಗಳಿಂದ ಹಣಕಾಸು ನೆರವು ಪೂರೈಸುತ್ತಿರುವ ಜಾಲಗಳನ್ನು ಭೇದಿಸುವ ಕಾರ್ಯಾಚರಣೆ ತೀವ್ರಗೊಳಿಸಿರುವ ಎನ್‍ಐಎ ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ.

ನಿಜಾಮುದ್ದೀನ್ ಪ್ರದೇಶದ ನಿವಾಸಿ ಮಹಮದ್ ಸಲ್ಮಾನ್ ದುಬೈ ಮೂಲದ ಪಾಕಿಸ್ತಾನ ಪ್ರಜೆ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆ ಮೂಲಕ ಲಷ್ಕರ್-ಎ-ತೈಬಾ(ಎಲ್‍ಇಟಿ) ಉಗ್ರಗಾಮಿ ಸಂಘಟನೆ ಜೊತೆ ಸಖ್ಯ ಹೊಂದಿರುವ ಎಫ್‍ಐಎಫ್ ಉಪ ಮುಖ್ಯಸ್ಥನೊಂದಿಗೆ ವ್ಯವಹಾರ ನಡೆಸುತ್ತಿರುವ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا