Urdu   /   English   /   Nawayathi

2+2 ಮಾತುಕತೆಗೆ ಮುನ್ನ ಭಾರತ-ಅಮೆರಿಕ ಮಹತ್ವದ ದ್ವಿಪಕ್ಷೀಯ ಚರ್ಚೆ

share with us

ನವದೆಹಲಿ: 06 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಭಾರತ ಮತ್ತು ಅಮೆರಿಕ ನಡುವೆ ನಡೆಯಲಿರುವ 2+2 ಮಾತುಕತೆಗೆ ಮುನ್ನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ದೆಹಲಿಯಲ್ಲಿ ತಮ್ಮ ಸಹವರ್ತಿಗಳಾದ ಜಿಮ್ ಮಟ್ಟಿಸ್ ಮತ್ತು ಮೈಕ್ ಪೊಂಪಿಯೋ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು. ದೆಹಲಿಯಲ್ಲಿ ಅಮೆರಿಕ ಮತ್ತು ಭಾರತದ ನಡುವೆ 2+2 ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಇದಕ್ಕೂ ಮುನ್ನ ನಿರ್ಮಲಾ ಮತ್ತು ಸುಷ್ಮಾ ಹಾಗೂ ಮಟ್ಟಿಸ್ ಮತ್ತು ಪೊಂಪಿಯೋ ನಡುವೆ ಪ್ರತ್ಯೇಕವಾಗಿ ಹಲವು ಪ್ರಮುಖ ದ್ವಿಪಕ್ಷೀಯ ವಿಷಯಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.  ಕಳೆದ ವರ್ಷ ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ನಿಗದಿಯಾದ 2+2 ಸಂವಾದದಲ್ಲಿ ಭಾಗವಹಿಸಲು ಅಮೆರಿಕದ ರಕ್ಷಣ ಸಚಿವರು ಹಾಗೂ ವಿದೇಶಾಂಗ ಸಚಿವರು ನಿನ್ನೆಯೇ ದೆಹಲಿಗೆ ಆಗಮಿಸಿದ್ದರು. ಇವರನ್ನು ನಿರ್ಮಲಾ ಮತ್ತು ಸುಷ್ಮಾ ಆತ್ಮೀಯವಾಗಿ ಬರಮಾಡಿಕೊಂಡರು.

ಮಾತುಕತೆ ವೇಳೆ ರಷ್ಯಾದಿಂದ ಭಾರತ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಹಾಗೂ ಇರಾನ್‍ನಿಂದ ತೈಲ ಖರೀದಿ ವಿಷಯಗಳಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯಗಳ ನಿವಾರಣೆ ಸಂಬಂಧ ನಡೆಯಿತು ಎಂದು ಮೂಲಗಳು ಹೇಳಿವೆ. ದೆಹಲಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಅಮೆರಿಕದ ಸಹವರ್ತಿಗಳಾದ ಜಿಮ್ ಮಟ್ಟಿಸ್ ಹಾಗೂ ಮೈಕ್ ಪೊಂಪಿಯೋ ನಡುವೆ 2+2 ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಅಮೆರಿಕ ಮತ್ತು ಭಾರತದ ರಕ್ಷಣಾ ಮತ್ತು ವಿದೇಶಾಂಗ ಸಂಬಂಧಗಳ ಬಲವರ್ಧನೆಗೆ ಈ ಚರ್ಚೆ ವೇಳೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا