Urdu   /   English   /   Nawayathi

ಭಾರತದ 300 ಮಕ್ಕಳನ್ನು ಅಮೆರಿಕಕ್ಕೆ ಮಾರಿದ್ದ ವಂಚಕ ಬಂಧನ

share with us

ಮುಂಬಯಿ: 16 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭಾರತದಿಂದ ಅಮೆರಿಕಕ್ಕೆ ಸುಮಾರು 300 ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯರನ್ನು ತಲಾ 45 ಲಕ್ಷ ರೂ.ಗೆ ಮಾರಾಟ ಮಾಡಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಅಂತಾರಾಷ್ಟ್ರೀಯ ಮಕ್ಕಳ ಮಾರಾಟ ಪ್ರಕರಣದ ಕಿಂಗ್‌ಪಿನ್‌ ಅನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ನಿವಾಸಿ ರಾಜುಭಾಯ್2007ರಲ್ಲೇ ಮಕ್ಕಳ ಮಾರಾಟ ದಂಧೆಯನ್ನು ಆರಂಭಿಸಿದ್ದರು. ಅಲ್ಲದೆ, ಅಮೆರಿಕ ಮೂಲದ ಗಿರಾಕಿಗಳಿಗೆ ಒಂದು ಮಗುವನ್ನು 45 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಾರ್ಚ್‌ ತಿಂಗಳಲ್ಲಿ ಈ ದಂಧೆಯ ಕೆಲ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಮಾರಾಟವಾದ ನೂರಾರು ಮಕ್ಕಳ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. 

ಗುಜರಾತ್‌ ಮೂಲದ ಹೆಚ್ಚು ಮಕ್ಕಳನ್ನು ಮಾರಾಟ ಮಾಡಲಾಗಿದ್ದು, ಪ್ರಮುಖವಾಗಿ ಬಡ ಕುಟುಂಬದ 11 ರಿಂದ 16 ವರ್ಷದ ಮಕ್ಕಳನ್ನು ಸಾಕಲಾಗದೆ ಅವರ ಪೋಷಕರು ಅಥವಾ ಇತರೆ ಪಾಲಕರಾಗಿದ್ದವರು ಸಹ ಮಾರಾಟ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಮೆರಿಕದಿಂದ ಮಕ್ಕಳನ್ನು ಕೊಂಡುಕೊಳ್ಳಲು ಗಿರಾಕಿಗಳು ಆರ್ಡರ್ ಮಾಡಿದ ತಕ್ಷಣ 50 ವರ್ಷದ ಕಿಂಗ್‌ಪಿನ್ ರಾಜುಭಾಯ್‌ ಬಡ ಕುಟುಂಬದವರನ್ನು ಹುಡುಕಲು ತನ್ನ ತಂಡವನ್ನು ಕಳುಹಿಸುತ್ತಾನೆ. ಹೆಚ್ಚಾಗಿ, ಮಕ್ಕಳನ್ನು ಮಾರಾಟ ಮಾಡಲು ಒಪ್ಪಿಗೆ ನೀಡುವ ಗುಜರಾತ್‌ನ ಬಡ ಜನತೆಯನ್ನು ಹುಡುಕುತ್ತಾರೆ. ಅಲ್ಲದೆ, ಮಕ್ಕಳ ಪಾಸ್‌ಪೋರ್ಟ್‌ಗಳನ್ನು ನೀಡುವ ಕುಟುಂಬದವರನ್ನು ಸಹ ಅವರು ಹುಡುಕುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ, ಮಾರಾಟವಾಗುವ ಮಗುವನ್ನು ತಕ್ಕ ಮಟ್ಟಿಗೆ ಹೋಲುವ ಫೋಟೋ ಹಾಕಿ ಪಾಸ್‌ಪೋರ್ಟ್ ಸಿದ್ಧಪಡಿಸಲಾಗುತ್ತೆ. ಅಲ್ಲದೆ, ಫೋಟೋ ರೀತಿ ಕಾಣುವಂತೆ ಮಗುವನ್ನು ಸಿದ್ಧಪಡಿಸಿ ಅದನ್ನು ಸಾಗಿಸಲಾಗುತ್ತೆ ಎಂದು ಅವರು ಹೇಳಿದ್ದಾರೆ. 

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ? 
ಮಾರ್ಚ್ ತಿಂಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸಲೂನ್‌ನಲ್ಲಿ ಮೇಕಪ್ ಮಾಡುತ್ತಿದ್ದ ವೇಳೆ ಅನುಮಾನಗೊಂಡು ನಟಿ ಪ್ರೀತಿ ಸೂದ್ ಗೆಳೆಯರೊಬ್ಬರು ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಟಿ ಅಲ್ಲಿಗೆ ಭೇಟಿ ಕೊಟ್ಟ ವೇಳೆಮಕ್ಕಳಿಗೆ ಹೇಗೆ ಮೇಕಪ್ ಮಾಡಬೇಕೆಂದು ಕೆಲವರು ಹೇಳಿಕೊಡುತ್ತಿದ್ದರು. ಇದರಿಂದ ಅನುಮಾನಗೊಂಡಿದ್ದ ನಟಿ ಪೊಲೀಸರಿಗೆ ಮಾಹಿತಿ ನೀಡಿದಾಗ ಮಕ್ಕಳ ಮಾರಾಟ ಮಾಡುವ ದೊಡ್ಡ ಜಾಲ ಬೆಳಕಿಗೆ ಬಂದಿತ್ತು. ಆ ವೇಳೆ, ನಿವೃತ್ತ ಪೊಲೀಸ್‌ ಎಸ್‌ಐ ಪುತ್ರ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. 

ಇನ್ನು, ಪ್ರಕರಣದ ಕಿಂಗ್‌ಪಿನ್‌ ರಾಜುಭಾಯ್‌ ತನ್ನ ಸಹಚರರನ್ನು ಸಂಪರ್ಕಿಸಲು ಬಳಸುತ್ತಿದ್ದ ವಾಟ್ಸಾಪ್ ನಂಬರ್‌ ಮೂಲಕ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಮತ್ತೊಂದೆಡೆ, 2007ರಲ್ಲೇ ಪಾಸ್‌ಪೋರ್ಟ್‌ ನಕಲು ಮಾಡಿದ್ದ ಆರೋಪದ ಮೇರೆಗೆ ಅವನನ್ನು ಬಂಧಿಸಲಾಗಿತ್ತು. ಆದರೆ, ಮಾರಾಟ ದಂಧೆ ನಡೆಸುತ್ತಿರುವ ಬಗ್ಗೆ ಮಾರ್ಚ್‌ 2018ರಲ್ಲಿ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಪರಮ್‌ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ. ಸೆಕ್ಷನ್ 34 ಹಾಗೂ 373ರಡಿ ಆರೋಪಿ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಆಗಸ್ಟ್ 18 ರವರೆಗೆ ಅವನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ರಾಜುಭಾಯ್‌ನ ನಾಲ್ವರು ಸಹಚರರು ನ್ಯಾಯಾಂಗ ಬಂಧನದಲ್ಲಿದ್ದಾರೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا