Urdu   /   English   /   Nawayathi

ಸಹಾಯ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಬೆಳಗಾವಿ ರೈತನಿಗೆ ಕಾದಿತ್ತು ಅಚ್ಚರಿ!

share with us

ಹುಬ್ಬಳ್ಳಿ: 09 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಸಹಾಯ ಕೋರಿ ಪ್ರದಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡು  ಗ್ರಾಮದ 25 ವರ್ಷದ ರೈತನಿಗೆ ಅಚ್ಚರಿ ಕಾದಿತ್ತು. ರಾಹುಲ್ ಬೆಕನಾಲಕರ್ ಮೇ 29 ರಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು, ತಾವು ವಾಸವಿರುವ ಹೋಬಳಿ 30 ಗ್ರಾಮಗಳನ್ನು ಹೊಂದಿದೆ. ಸರಿಯಾದ ಚಿಕಿತ್ಸೆಯಿಲ್ಲದೇ ತನ್ನ ಹಸು ಮತ್ತು ಕರು ಸಾವನ್ನಪ್ಪಿತ್ತು.  ಅದಾದ ನಂತರ ಆಗಸ್ಟ್ 6 ರಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ರೈತನ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಜಿಲ್ಲೆಯ ಹಲವು ಅಧಿಕಾರಿಗಳಿಂದ ರಾಹುಲ್ ಅವರಿಗೆ ಕರೆ ಬಂದಿತ್ತು. 

3 ಎಕರೆ ಜಮೀನು ಹೊಂದಿರುವ ರಾಹುಲ್ ಹಸುವಿನ ಹೆರಿಗೆ ವೇಳೆ ತಾನು ಸಾಕಿದ್ದ ಹಸು ಗೌರಿ ಮತ್ತು ಅದರ ಕರು ಸಾವನ್ನಪ್ಪಿತ್ತು. ಹೆರಿಗ ವೇಳೆ  ಗ್ರಾಮದಲ್ಲಿ ವೈದ್ಯಕೀಯ ಸಹಾಯ ದೊರಕದ ಕಾರಣ ಹಸು ಮತ್ತು ಕರು ಸಾವನ್ನಪ್ಪಿತ್ತು. ತಮ್ಮ ಗ್ರಾಮ ಅಥವಾ ಸುತ್ತಮುತ್ತಲ ಗ್ರಾಮದಲ್ಲಿ ಪಶುವೈದ್ಯ ಚಿಕಿತ್ಸಾ ಘಟಕ ತೆರೆಯುವಂತೆ ಪತ್ರದಲ್ಲಿ ಕೋರಿದ್ದರು.

2008 ರಲ್ಲಿ ನಡೆದ ಅಪಘಾತದಲ್ಲಿ ತಮ್ಮ ತಂದೆ ಸಾವನ್ನಪ್ಪಿದ್ದರು. ಹಸುವಿನಿಂದ ತಮ್ಮ ಜೀವನ ಸಾಗುತ್ತಿತ್ತು , ಆದರೆ ಹಸು ಮತ್ತು ಕರು ಸತ್ತ ನಂತರ ಜೀವನ ನಡೆಸುವುದು ಕಷ್ಟವಾಗುತ್ತಿದೆ. ತಾನು ಬಿ.ಕಾಂ ವ್ಯಾಸಂಗ ಮಾಡುತ್ತಿದ್ದು, ಇದಕ್ಕಾಗಿ 60 ಕಿಮೀ ದೂರ ಪ್ರಯಾಣಿಸಬೇಕಾಗಿ ತಿಳಿಸಿದ್ದಾರೆ.

ಮುರಗೋಡು ಸವದತ್ತಿ ತಾಲೂಕಿನಲ್ಲಿದ್ದು, ಆದರೆ ಪಶು ಸಂಗೋಪನಾ ಚಿಕಿತ್ಸೆ ಘಟಕ ಬೈಲಹೊಂಗಲದಲ್ಲಿದೆ. ಅಲ್ಲಿಂದ ವೈದ್ಯರು ಬಂದು ಚಿಕಿತ್ಸೆ ನೀಡಬೇಕಾದರೇ  ಪ್ರತಿ ಬಾರಿಗೆ 5 ರಿಂದ 6 ಸಾವಿರ ರು. ಚಾರ್ಜ್ ಮಾಡುತ್ತಾರೆ,  ಹೀಗಾಗಿ ಪ್ರಧಾನಿ ಮಧ್ಯಸ್ಥಿಕೆ  ವಹಿಸಿ ಪಶು ಚಿಕಿತ್ಸಾ ಸೌಲಭ್ಯ ಒದಗಿಸಿಕೊಡಬೇಕೆಂದು ಪತ್ರ ಬರೆದಿದ್ದಾರೆ.

ಸಮಯಕ್ಕೆ ಸರಿಯಾದ ಸಹಾಯ ದೊರೆಯದ ಕಾರಣ ನಾನು ನನ್ನ ಹಸು ಕಳೆದುಕೊಂಡೆ, ನನ್ನಂತ ನೂರಾರು ಮಂದಿ ಹಸುಗಳನ್ನು ಸಾಕಿದ್ದಾರೆ,ಕೆಲವೊಮ್ಮೆ ಬೆಳಗಾವಿ, ಧಾರವಾಡ ಮತ್ತು ಬೈಲಹೊಂಗಲದಿಂದ ವೈದ್ಯರು ಬರಬೇಕಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಹಸುವಿನ ಮಾಲೀಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.

ಪಶು ಸಂಗೋಪನಾ ಇಲಾಖೆಯ  ಬೆಂಗಳೂರಿನ ಅಧಿಕಾರಿಗಳು, ಸವದತ್ತಿ ಮತ್ತು ಮುರಗೋಡು ಅಧಿಕಾರಿಗಳು ಫೋನಿನಲ್ಲಿ ರಾಹುಲ್ ಜೊತೆ ಮಾತನಾಡಿದ್ದಾರೆ. ಹಸು ಮತ್ತು ಕರು ಸತ್ತ ಬಗ್ಗೆ ಯಾವುದಾದರೂ ದೂರು ದಾಖಲಿಸಿದ್ದೀರಾ ಎಂದು ಅದಿಕಾರಿಗಳು ಪ್ರಶ್ನಿಸಿದರು, ನಮಗೆ ಮೇಲಿನ ಅಧಿಕಾರಿಗಳಿಂದ ಹೆಚ್ಚಿನ ಒತ್ತಡವಿದೆ ಎಂದು ಹೇಳಿದರು.

ನಾನು ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದೆ ಎಂದು ಹೇಳಿದಾಗ ಅವವೆಲ್ಲಾ ಆಶ್ಚರ್ಯ ಚಕಿತರಾದರು,. ನಂತರ ಅಧಿಕಾರಿಗಳು ನನಗೆ ಪಶು ಭಾಗ್ಯ ಯೋಜನೆ ಬಗ್ಗೆ ವಿವರಿಸಿದರು, ಕೇಂದ್ರ ಸರ್ಕಾರದ ಪಶು ಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ನನ್ನ ಸಮಸ್ಯೆ ಕೇಳಿದರು, ಜೊತೆಗೆ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ. ಹಾಗೂ ಪಶು ಚಿಕಿತ್ಸಾಲಯ ಸ್ಥಾಪಿಸುವ ಬಗ್ಗೆಯು ತಿಳಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا