Urdu   /   English   /   Nawayathi

ರೈಲ್ವೆಗಾಗಿ 8 ಚಕ್ರಗಳ ಡೀಸೆಲ್ ಎಲೆಕ್ಟ್ರಿಕ್ ಟವರ್ ಕಾರ್ ಅಭಿವೃದ್ಧಿ

share with us

ಬೆಂಗಳೂರು: 02 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಅತ್ಯಾಧುನಿಕ ಬಹುಪಯೋಗಿ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ನಿರ್ಮಿಸು ವಲ್ಲಿ ಮುಂಚೂಣಿ ಯಲ್ಲಿರುವ ಭಾರತ್ ಅರ್ಥ್‍ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)ಈಗ ಭಾರತೀಯ ರೈಲ್ವೆಗಾಗಿ 8 ಚಕ್ರಗಳ ಡೀಸೆಲ್ ಎಲೆಕ್ಟ್ರಿಕಲ್ ಟವರ್ ಕಾರನ್ನು ಅಭಿವೃದ್ಧಿಗೊಳಸಿದೆ. ಬೆಂಗಳೂರಿನಲ್ಲಿ ಈ ಅತ್ಯಾಧುನಿಕ ವಾಹನವನ್ನು ಬಿಡುಗಡೆ ಮಾಡ ಲಾಗಿದೆ. ಹೊಸ 8ಡಬ್ಲ್ಯೂ ಡಿಇಡಿಸಿ ವಾಹನವನ್ನು ದೇಶೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದು, ಇದು ಬಿಇಎಂಎಲ್‍ನ ಮತ್ತೊಂದು ಪ್ರತಿಷ್ಠಿತ ಮತ್ತು ಹೆಮ್ಮೆಯ ಉತ್ಪನ್ನವಾಗಿದೆ. ಕೇಂದ್ರ ಸರ್ಕಾರದ ಮೇಕ್ ಇಂಡಿಯಾ ಯೋಜನೆಗೆ ಇದು ಪೂರಕವಾಗಿದೆ ಎಂದು ಈ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ ವೇಳೆ ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ.ಹೋಟಾ ತಿಳಿಸಿದ್ದಾರೆ.

ಈ ಅತ್ಯಾಧುನಿಕ ವಾಹನವನ್ನು ರೈಲ್ವೆ ಹಳಿಗಳ ತಪಾಸಣೆ, ಕಣ್ಗಾವಲು ಮತ್ತು ನಿರ್ವಹಣೆಗೆ ಅತ್ಯಂತ ಸಮರ್ಪಕವಾಗಿ ಬಳಸಬಹುದಾಗಿದೆ. ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸುವ ಈ ವಿದ್ಯುತ್ ವಾಹನವು ಪರಿಸರ ಸ್ನೇಹಿಯಾಗಿದೆ. ರೈಲ್ವೆ ಹಳಿಯ ಮೇಲೆ ನಿಗಾ ಇರಿಸಲು ಮತ್ತು ಅವುಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಈ ಅತ್ಯಾಧುನಿಕ ಸಾಧನ ನೆರವಾಗಲಿದೆ. ಬಿಇಎಂಎಲ್ ಮೆಟ್ರೋ ಭೋಗಿ ತಯಾರಿಸುವ ಸಂಸ್ಥೆಯಾಗಿಯೂ ಮುಂಚೂಣಿಯಲ್ಲಿದ್ದು, ಇದೀಗ ರೈಲ್ವೆ ಇಲಾಖೆಗೂ ಅತ್ಯಾಧಿನಿಕ ಸಾಧನವೊಂದನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا