Urdu   /   English   /   Nawayathi

ಸೈಕಲ್‌ ರವಿ ಜತೆಗಿನ ನಂಟು ನಿರಾಕರಿಸಿದ ಎಂ ಬಿ ಪಾಟೀಲ್

share with us

ಬೆಂಗಳೂರು: 18 ಜುಲೈ (ಫಿಕ್ರೋಖಬರ್ ಸುದ್ದಿ) ಸಿಸಿಬಿ ಪೊಲೀಸರ ಗುಂಡೇಟು ತಿಂದು ಪರಪ್ಪನ ಅಗ್ರಹಾರ ಸೇರಿರುವ ರೌಡಿ ಶೀಟರ್‌ ಸೈಕಲ್‌ ರವಿ ಮಾಜಿ ಸಚಿವ ಎಂ.ಬಿ.ಪಾಟೀಲರಿಗೂ ಕರೆ ಮಾಡಿದ್ದ ಎನ್ನುವ ಸುದ್ದಿ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು ಈ ಆರೋಪವನ್ನು ಪೊಲೀಸರು ಮತ್ತು ಮಾಜಿ ಸಚಿವರು ಅಲ್ಲಗಳೆದಿದ್ದಾರೆ. ಸಿದ್ದರಾಮಯ್ಯರ ಸಂಪುಟದಲ್ಲಿ ಪ್ರಭಾವೀ ಸಚಿವರಾಗಿದ್ದ ಎಂ.ಬಿ.ಪಾಟೀಲರಿಗೆ ನಂಬರಿಗೆ 9741199999 ನಂಬರಿನಿಂದ ಕರೆಗಳ ವಿನಿಮಯವಾಗಿವೆ. ಮೊಬೈಲ್‌ ಸಿಡಿಆರ್‌ ವರದಿ ಪ್ರಕಾರ ಎರಡೂ ನಂಬರಿಗೆ ಒಟ್ಟು 78 ಕರೆಗಳ ವಿನಿಮಯವಾಗಿವೆ ಮತ್ತು ಎರಡು ಸಂದೇಶಗಳನ್ನು ಕಳುಹಿಸಲಾಗಿದೆ. 

ಸಿಮ್‌ ಕಾರ್ಡ್‌ ನಿಗೂಢ 
ಸೈಕಲ್‌ ರವಿಯನ್ನು ಬಂಧಿಸುವ ವೇಳೆ ಪೊಲೀಸರು ಆತನಿಂದ 8 ಕ್ಕೂ ಹೆಚ್ಚು ಮೊಬೈಲ್‌ ಫೋನ್‌ವಶಕ್ಕೆ ಪಡೆದಿದ್ದರು. ಯಾವುದೇ ರೌಡಿ ಶೀಟರ್‌ ಪದೇ ಪದೆ ಸಿಮ್‌ ಕಾರ್ಡ್‌ಗಳನ್ನು ಬದಲಾಯಿಸುವುದು ಮತ್ತು ತಮಗೆ ಪರಿಚಯವಿದ್ದವರ ಹೆಸರಿನಲ್ಲಿ ಸಿಮ್‌ಗಳನ್ನು ಖರೀದಿಸಿ ಪೊಲೀಸರ ದಿಕ್ಕು ತಪ್ಪಿಸುವುದು ಮಾಮೂಲಿನ ಸಂಗತಿ. ಈ ರೀತಿ ಪರಿಶೀಲನೆ ವೇಳೆ 9741199999 ನಂಬರಿನ ಸಿಮ್‌ ಕಾರ್ಡ್‌ ಸೈಕಲ್‌ ರವಿಯಿಂದ ವಶಪಡಿಸಿಕೊಂಡ ಹ್ಯಾಂಡ್‌ ಸೆಟ್‌ನಲ್ಲಿ ಕೆಲ ಕಾಲ ಬಳಕೆ ಆಗಿತ್ತು ಎಂದು ತಿಳಿದು ಬಂದಿದೆ. ಆದರೆ ಈ ಸಿಮ್‌ ಕಾರ್ಡ್‌ ಸೈಕಲ್‌ ರವಿ ಹೆಸರಿನಲ್ಲಿ ಇರಲೇ ಇಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ಸಿಮ್‌ ನನ್ನದು 
ವಾಹಿನಿಗಳಲ್ಲಿ ಮೊಬೈಲ್‌ ಸಿಡಿಆರ್‌ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಮುಖಂಡ ಸಚ್ಚಿದಾನಂದ ಎನ್ನುವವರು ಈ ಸಿಮ್‌ ಕಾರ್ಡ್‌ ನನ್ನದು. ನನ್ನದೇ ಹೆಸರಿನಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇವರ ಹೆಸರಿನಲ್ಲಿ ಇರುವ ಸಿಮ್‌ ಕಾರ್ಡ್‌ ಸೈಕಲ್‌ ರವಿಯಿಂದ ವಶಪಡಿಸಿಕೊಂಡ ಹ್ಯಾಂಡ್‌ಸೆಟ್‌ನಲ್ಲಿ ಬಳಕೆ ಆಗಿದ್ದು ಹೇಗೆ ಎನ್ನುವುದಕ್ಕೆ ಪೊಲೀಸರ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ. ಸಚ್ಚಿದಾನಂದ ಅವರ ದಾಖಲೆಗಳನ್ನೇ ನೀಡಿ ಸೈಕಲ್‌ ರವಿ ನಕಲಿ ಸಿಮ್‌ ಕಾರ್ಡ್‌ ಪಡೆದುಕೊಂಡಿದ್ದನೇ ? ಅಥವಾ ಸೈಕಲ್‌ ರವಿ ಬಳಿ ಸಿಕ್ಕಿರುವ ಹ್ಯಾಂಡ್‌ಸೆಟ್‌ ಸಚ್ಚಿದಾನಂದ ಅವರು ಹಿಂದೆ ಬಳಸಿದ್ದರೇ ? ಎನ್ನುವ ಪ್ರಶ್ನೆಗಳೂ ಎದ್ದಿವೆ. 

ನಂಬರ್‌ ನನ್ನದೇ 
ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಸಚಿವ ಎಂ.ಬಿ.ಪಾಟೀಲರು 7760977777 ಮೊಬೈಲ್‌ ನಂಬರ್‌ ನನ್ನದೇ. ಆದರೆ ನನಗೆ ಸೈಕಲ್‌ ರವಿ ಯಾರೋ ಗೊತ್ತಿಲ್ಲ. ಆ ಹೆಸರನ್ನೂ ನಾನು ಇದುವರೆಗೂ ಕೇಳಿಲ್ಲ. ಆತನ ಮುಖವನ್ನೂ ನೋಡಿಲ್ಲ. ಆದರೆ ಕಾಂಗ್ರೆಸ್‌ ಮುಖಂಡರಾದ ಸಚ್ಚಿದಾನಂದ ಅವರು ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಈ ಕಾರಣಕ್ಕೆ ಅವರ ಜತೆ ಬಹಳ ಬಾರಿ ಮಾತನಾಡಿದ್ದೇನೆ. ನಾನು ಅಂಥವರ ಸಹವಾಸ ಮಾಡುವುದಿಲ್ಲ. ಹೀಗಾಗಿ ಈ ಸುದ್ದಿಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಸಿಬಿ ಅಧಿಕಾರಿಗಳೂ ಸ್ಪಷ್ಟನೆ ನೀಡಿದ್ದು ಕೆಲವು ಪ್ರಮುಖ ರಾಜಕಾರಣಿಗಳು ಮತ್ತು ಸಿನಿಮಾ ನಟರುಗಳ ಜತೆ ಸೈಕಲ್‌ ರವಿಗೆ ಒಡನಾಟ ಇತ್ತು ಎನ್ನುವ ಸುದ್ದಿ ಊಹಾತ್ಮಕವಾಗಿದ್ದು, ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾರೆ. 

ಸಾಧು ಕೋಕಿಲಾ ಬಂದು ಹೋಗಿದ್ದರು 
ಒಂದು ಕಡೆ ಸೈಕಲ್‌ ರವಿಗೂ ಸಿನಿಮಾ ನಟರಿಗೂ ಯಾವುದೇ ಸಂಬಂಧ ಇರಲಿಲ್ಲ ಎಂದು ಸಿಸಿಬಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆದರೆ ಕೆಲವು ದಿನಗಳ ಹಿಂದಷ್ಟೇ ಸಿನಿಮಾ ನಟ ಸಾಧು ಕೋಕಿಲಾ ಅವರು ಸಿಸಿಬಿ ಕಚೇರಿಗೇ ಬಂದು ಹೋಗಿದ್ದರು. ಸೈಕಲ್‌ ರವಿ ಪರಿಚಯದ ಬಗ್ಗೆ ಸಿಸಿಬಿ ಪೊಲೀಸರು ಪ್ರಶ್ನಿಸಿದ್ದರು. ಸಾಧು ಕೋಕಿಲಾ ಅವರಿಗೂ ಕೂಡ 9741199999 ನಂಬರಿನಿಂದ ಲೇ ಕರೆಗಳ ವಿನಿಮಯವಾಗಿತ್ತು ಎನ್ನಲಾಗಿದೆ. ಸಾಧು ಅವರನ್ನು ಕರೆದು ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ಎಂ.ಬಿ.ಪಾಟೀಲರ ವಿಚಾರದಲ್ಲಿ ಮಾತ್ರ ಆರೋಪವನ್ನು ಅಲ್ಲಗಳೆದಿದ್ದಾರೆ. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا