Urdu   /   English   /   Nawayathi

ಘೋರ: ಸಾಮೂಹಿಕ ಅತ್ಯಾಚಾರಗೈದು ದೇಗುಲದ ಹೋಮಕುಂಡದಲ್ಲಿ ದಹನ

share with us

ಬರೇಲಿ: 15 ಜುಲೈ (ಫಿಕ್ರೋಖಬರ್ ಸುದ್ದಿ) ಸಮಾಜ ಎಷ್ಟು ಕೆಟ್ಟು ಹೋಗಿದೆ ಎಂಬುದಕ್ಕೆ ಜ್ವಲಂತ ನಿದರ್ಶನವಿದು. 35 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಐವರು ಕಾಮುಕರು, ಬಳಿಕ ಆಕೆಯನ್ನು ದೇವಸ್ಥಾನದ ಯಜ್ಞಶಾಲೆಯಲ್ಲಿ ಜೀವಂತವಾಗಿ ದಹಿಸಿ ಸುಟ್ಟು ಹಾಕಿದ ಪೈಶಾಚಿಕ ಘಟನೆ ಉತ್ತರ ಪ್ರದೇಶದ ಸಂಭಾಲ ಜಿಲ್ಲೆಯಲ್ಲಿ ನಡೆದಿದೆ. 
ಸಾವಿಗೂ ಮುನ್ನ ಸಂತ್ರಸ್ತೆ ಪೊಲೀಸ್ ಸಹಾಯವಾಣಿ(100)ಗೆ ಕರೆ ಮಾಡಿದ್ದಳಾದರೂ, ಯಾವುದೇ ಉತ್ತರ ದೊರೆಯಲಿಲ್ಲ ಎಂದು ಗಾಜಿಯಾಬಾದ್‌ನಲ್ಲಿ ದಿನಗೂಲಿ ಕಾರ್ಮಿಕನಾಗಿರುವ ಸಂತ್ರಸ್ತೆಯ ಪತಿ ದೂರಿದ್ದಾನೆ. 
ರಾಜ್ಪುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಸುಕಿನ ಜಾವ 2.30ರ ಸುಮಾರಿಗೆ ಈ ಘೋರ ಕೃತ್ಯ ನಡೆದಿದ್ದು, ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆ ಸಮಯದಲ್ಲಿ ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು. ಭಾರಿ ಮಳೆ ಬೀಳುತ್ತಿದ್ದು, ಗ್ರಾಮದಲ್ಲಿ ವಿದ್ಯುತ್ ನಿಲುಗಡೆಯಾಗಿತ್ತು. ಕೃತ್ಯದ ಬಳಿಕ ಮಹಿಳೆ ಪತಿ ಮತ್ತು ಆತನ ಸಹೋದರನಿಗೆ ಫೋನ್ ಕರೆ ಮಾಡಿದ್ದಾಳೆ. ಆದರೆ ಅವರಿಬ್ಬರ ಫೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ತನ್ನ ಸಂಬಂಧಿಗೆ ಫೋನ್ ಕರೆ ಮಾಡಿ ಎಲ್ಲವನ್ನು ವಿವರಿಸಿದ್ದಾಳೆ. ತಾನು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದು, ಯಾರು ಕೂಡ ಕರೆ ಸ್ವೀಕರಿಸಿಲ್ಲ ಎಂದು ಸಹ ಆಕೆ ತನ್ನ ಸಂಬಂಧಿ ಬಳಿ ಹೇಳಿಕೊಂಡಿದ್ದಾಳೆ. 
ಸಂಬಂಧಿ ಪೊಲೀಸರಿಗೆ ದೂರು ನೀಡುವಷ್ಟರಲ್ಲಿ ಮತ್ತೆ ಬಂದ ದುಷ್ಕರ್ಮಿಗಳು ಪತ್ನಿಯನ್ನು ಹತ್ತಿರದ ದೇವಸ್ಥಾನಕ್ಕೆ ಎಳೆದೊಯ್ದು ಯಜ್ಞಶಾಲೆಯಲ್ಲಿ ಹಾಕಿ ಜೀವಂತ ಸುಟ್ಟಿದ್ದಾರೆ, ಎಂದು ಮೃತಳ ಪತಿ ದೂರಿದ್ದಾರೆ. 
ಆರೋಪಿಗಳನ್ನು ಅರಮ್ ಸಿಂಗ್, ಮಹಾವೀರ್, ಚರಣ್ ಸಿಂಗ್, ಗುಲ್ಲು ಮತ್ತು ಕುಮಾರ್ ಪಾಲ್ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ನಿವಾಸಿಗಳಾಗಿರುವ ಅವರು ಕೆಲ ತಿಂಗಳಿಂದ ಅವರು ಮಹಿಳೆಗೆ ಪದೇ ಪದೇ ತೊಂದರೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. 

ವಿ, ಕ ವರದಿ  

Prayer Timings

Fajr فجر
Dhuhr الظهر
Asr أسر
Maghrib مغرب
Isha عشا