Urdu   /   English   /   Nawayathi

ಕೇಜ್ರಿ V/s ಬೈಜಾಲ್ ಸಮರಕ್ಕೆ ತೆರೆ: ದೆಹಲಿಗೆ ರಾಜ್ಯದ ಸ್ಥಾನಮಾನ ಸುಪ್ರೀಂ ತಿರಸ್ಕಾರ

share with us

ನವದೆಹಲಿ: 04 ಜುಲೈ (ಫಿಕ್ರೋಖಬರ್ ಸುದ್ದಿ) ಆ‌ಡಳಿತಾರೂಢ ಎಎಪಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗೌಱ್ನರ್ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಅಧಿಕಾರದ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಿರುವ ಸುಪ್ರೀಂಕೋರ್ಟ್, ಲೆಫ್ಟಿನೆಂಟ್ ಗೌಱ್ನರ್ ಸಂಪುಟದ ಸಲಹೆಯಂತೆ ಕಾರ್ಯನಿರ್ವಹಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ.

  •  ದೆಹಲಿ ಅಧಿಕಾರದ ಕಿತ್ತಾಟ
  •  ಎಲ್‌ಜಿ ಅಧಿಕಾರಕ್ಕೆ ಸುಪ್ರೀಂ ಬ್ರೇಕ್.
  •  ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ಇಲ್ಲ.
  •  ಸಂಪುಟದ ಸಲಹೆಯಂತೆ ಎಲ್‌ಜಿ ಕಾರ್ಯನಿರ್ವಹಿಸಬೇಕು.
  •  ದೆಹಲಿಯಲ್ಲಿ ಅರಾಜಕತೆಗೆ ಅವಕಾಶವಿಲ್ಲ.
  •  ಸರ್ಕಾರ ಮತ್ತು ಎಲ್‌ಜಿ ನಡುವೆ ಭಿನ್ನಾಭಿಪ್ರಾಯವಿದ್ದರೆ ರಾಷ್ಟ್ರಪತಿಗಳ ಬಳಿ ತೆರಳಲು ಅವಕಾಶ.

ರಾಷ್ಟ್ರರಾಜಧಾನಿ ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಸರ್ಕಾರ ಮತ್ತು ಲೆಫ್ಟಿನೆಂಟ್ ಗೌಱ್ನರ್ ನಡುವೆ ಭಿನ್ನಾಭಿಪ್ರಾಯಗಳು ಎದುರಾದಾಗ ರಾಷ್ಟ್ರಪತಿ ಅವರ ಬಳಿ ತೆರಳಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ  ಸಾಂವಿಧಾನಿಕ ಪೀಠ ಈ ತೀರ್ಪು ಪ್ರಕಟಿಸಿದೆ.

ದೆಹಲಿಯಲ್ಲಿ ಅರಾಜಕತೆಗೆ ಅವಕಾಶ ನೀಡುವುದಿಲ್ಲ. ಎಲ್ಲ ರಾಜ್ಯಗಳ ರಾಜ್ಯಪಾಲರಿಗೆ ಇರುವ ಅಧಿಕಾರ ಲೆಫ್ಟಿನೆಂಟ್ ಗೌಱ್ನರ್‌ಗೆ ಇರುವುದಿಲ್ಲ. ಕೇಜ್ರಿವಾಲ್ ಸಂಪುಟದ ಸಲಹೆಯಂತೆ ರಾಜ್ಯಪಾಲರು ಕಾರ್ಯನಿರ್ವಹಿಸಬೇಕು ಎಲ್ಲ ಸಚಿವರನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಲೆಫ್ಟಿನೆಂಟ್ ಗೌಱ್ನರ್ ಅಧಿಕಾರಕ್ಕೆ ಕತ್ತರಿ ಹಾಕಿದೆ.

ಸಚಿವ ಮಂಡಲದಲ್ಲಿ ಕೈಗೊಳ್ಳಲಾದ ಎಲ್ಲಾ ನಿರ್ಧಾರಗಳನ್ನು ಲೆ.ಗೌಱ್ನರ್‌ರ ಗಮನಕ್ಕೆ ತರಬೇಕು. ಆದರೆ, ಇದಕ್ಕೆ ಅವರ ಸಮ್ಮತಿ ಬೇಕು ಎಂದರ್ಥವಲ್ಲ ಎಂದೂ ನ್ಯಾಯಪೀಠ ಹೇಳಿದೆ. ಇಲ್ಲಿ ಸಾರಾಸಗಟು ಅಥವಾ ಅರಾಜಕತೆ ಎರಡಕ್ಕೂ ಆಸ್ಪದವಿಲ್ಲ ಎಂದೂ ಪೀಠ ಹೇಳಿದೆ.

ಕಾರ್ಯಾಂಗದ ಎರಡು ಟಿಸಿಲುಗಳಾದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಲೆ.ಗೌ. ಅನಿಲ್ ಬೈಜಾಲ್ ಅವರ ನಡುವೆ ಒಂದೇ ಸಮನೆ ನಡೆದಿದ್ದ ಅಧಿಕಾರದ ಹಗ್ಗಜಗ್ಗಾಟದಲ್ಲಿ ಕೇಜ್ರಿವಾಲ್ ಅವರಿಗೆ ದೊರೆತ ಅತಿ ದೊಡ್ಡ ವಿಜಯ ಇದಾಗಿದೆ.

ಭೂಮಿ ಮತ್ತು ಶಾಂತಿ ಸುವ್ಯವಸ್ಥೆ ಸೇರಿದಂತೆ 3 ವಿಷಯಗಳನ್ನು ಬಿಟ್ಟರೆ ಇತರ ವಿಷಯಗಳು ಆಡಳಿತ ನಿರ್ವಹಿಸಲು ದೆಹಲಿ ಸರ್ಕಾರಕ್ಕೆ ಅಧಿಕಾರವಿದೆ ಎಂದೂ ನ್ಯಾಯಾಲಯ ಹೇಳಿದೆ.

ಲೆಫ್ಟಿನೆಂಟ್ ಗೌಱ್ನರ್ ದೇಶದ ರಾಜಧಾನಿಯ ಆಡಳಿತ ಮುಖ್ಯಸ್ಥರು ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ಸರ್ಕಾರ ಸಲ್ಲಿಸಿದ್ದ ಹಲವಾರು ಅರ್ಜಿಗಳನ್ನು ಕುರಿತಂತೆ ಸುಪ್ರೀಂಕೋರ್ಟ್ ಇಂದು ತೀರ್ಪಿತ್ತಿದೆ.

ಸುಪ್ರೀಂಕೋರ್ಟ್ ಆಜ್ಞೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ ನ್ಯಾಯಪೀಠ, `ಲೆಫ್ಟಿನೆಂಟ್ ಗೌಱ್ನರ್ ಯಾಂತ್ರಿಕವಾಗಿ ಕೆಲಸ ಮಾಡುತ್ತಾ ಸಚಿವ ಮಂಡಲದ ನಿರ್ಧಾರಗಳಿಗೆ ತಡೆಯೊಡ್ಡುವಂತಿಲ್ಲ’ ಎಂದೂ ಹೇಳಿದೆ.

ಲೆಫ್ಟಿ‌ನೆಂಟ್ ಗೌಱ್ನರ್‌ಗೆ ಸ್ವತಂತ್ರ ಅಧಿಕಾರಗಳನ್ನು ಕೊಟ್ಟಿಲ್ಲ. ಅವರು ಕೆಲವು ಅಪರೂಪದ ವಿಷಯಗಳನ್ನು ಮಾತ್ರ ರಾಷ್ಟ್ರಪತಿಗಳಿಗೆ ಕಳಿಸಬಹುದೇ ಹೊರತು ಅದನ್ನೇ ಒಂದು ನಿಯವನ್ನಾಗಿ ಪಾಲಿಸಬಾರದು.

ಸಚಿವ ಮಂಡಲದೊಡನೆ ಲೆಫ್ಟಿನೆಂಟ್ ಗೌಱ್ನರ್ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಬೇಕು. ಭಿನ್ನಾಭಿಪ್ರಾಯವಿದ್ದಲ್ಲಿ ಅದನ್ನು ಚರ್ಚೆ ಹಾಗೂ ಅಭಿಪ್ರಾಯಗಳನ್ನು ಪಡೆದು ಬಗೆಹರಿಸಿಕೊಳ್ಳಬೇಕು’ ಎಂದೂ ನ್ಯಾಯಪೀಠ ಹೇಳಿದೆ.

ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದಲ್ಲಿ ನ್ಯಾಯಾಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ ಕಾನ್ವಿಲ್ ಕರ್, ಡಿ.ವೈ ಚಂದ್ರಚೂಡ್ ಹಾಗೂ ಅಶೋಕ್ ಭೂಷಣ್ ಅವರಿದ್ದ ಪೀಠ, ಈ ತೀರ್ಪು ನೀಡಿದೆ.

ಒಕ್ಕೂಟ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗೌಱ್ನರ್ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರತಿಯೊಂದು ವಿಷಯಕ್ಕೂ ಲೆಫ್ಟಿ‌ನೆಂಟ್ ಗೌಱ್ನರ್ ಅಡ್ಡಿಪಡಿಸುತ್ತಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಜನಾದೇಶದೊಂದಿಗೆ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿಗೆ ಯಾವುದೇ ಅಧಿಕಾರ ಇಲ್ಲದಂತಾಗಿದೆ ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಲೆಫ್ಟಿನೆಂಟ್ ಗೌಱ್ನರ್ ಅನಿಲ್ ಬೈಜಾಲ್ ನಿವಾಸದಲ್ಲೇ ತನ್ನ ಸಂಪುಟದ ಹಲವು ಸಹೋದ್ಯೋಗಿಗಳೊಂದಿಗೆ ಧರಣಿ ನಡೆಸಿದ್ದರು.

ಅರವಿಂದ್ ಕೇಜ್ರಿವಾಲ್‌ಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ, ಚಂದ್ರಬಾಬುನಾಯ್ದು ಸೇರಿದಂತೆ ಹಲವು ಮುಖ್ಯಮಂತ್ರಿಗಳು ಬೆಂಬಲ ಸೂಚಿಸಿ ಕೇಂದ್ರ ಸರ್ಕಾರ ಶೀಘ್ರ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಒತ್ತಡ ಹೇರಿದ್ದರು.

ಆದರೂ, ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಆಡಳಿತಾರೂಢ ಎಎಪಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಾದ-ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್, ಆಡಳಿತಕ್ಕೆ ಕಡಿವಾಣ ಹಾಕಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا