Urdu   /   English   /   Nawayathi

ಅಂಕೋಲಾದಲ್ಲಿ ಎತ್ತುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿ

share with us

ಅಂಕೋಲಾ: 27 ಜೂನ್ (ಫಿಕ್ರೋಖಬರ್ ಸುದ್ದಿ) ಅಂಕೋಲಾ ತಾಲೂಕಿನ ಹೆಬ್ಬುಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಮಹಾರಾಷ್ಟ್ರದಿಂದ ಕೇರಳಕ್ಕೆ ಸಾಗಿಸುತ್ತಿದ್ದ ಎತ್ತುಗಳ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಮೂರು ಎತ್ತುಗಳು ಮೃತಪಟ್ಟಿವೆ ಎನ್ನಲಾಗಿದೆ. ವರದಿಗಳ ಪ್ರಕಾರ ಈಚರ್ ವಾಹನದಲ್ಲಿ ಒಟ್ಟು ಹತ್ತು ಎತ್ತುಗಳನ್ನು ಸಾಗಿಸಲಾಗುತ್ತಿತ್ತು, ಚಾಲಕನ ನಿಯಂತ್ರಣ ತಪ್ಪಿದ ಕಾರಣ ವಾಹನ ಪಲ್ಟಿಯಾಗಿ ಸ್ಥಳದಲ್ಲಿ ಮೂರು ಎತ್ತುಗಳು ಮೃತಪಟ್ಟಿದ್ದು, ಒಂದು ಗಂಭೀರವಾಗಿ ಗಾಯಗೊಂಡಿದೆ ಎನ್ನಲಾಗಿದೆ. ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಎತ್ತುಗಳನ್ನು ಗೋ ಶಾಲೆಗೆ ಸಾಗಿಸಲಾಗುತ್ತಿತ್ತೋ ಅಥವಾ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತೋ ಎನ್ನುವುದು ಇದುವರೆಗೂ ತಿಳಿದು ಬಂದಿಲ್ಲ. ಪ್ರಕರಣ ಅಂಕೋಲಾ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا