Urdu   /   English   /   Nawayathi

ಗುಡ್ಡ ಕುಸಿತ: ಗುರುವಾರ ಬೆಳಿಗ್ಗೆವರೆಗೆ ಚಾರ್ಮಾಡಿ ಘಾಟ್‌ ಬಂದ್‌

share with us

ಮಂಗಳೂರು: 12 ಜೂನ್ (ಫಿಕ್ರೋಖಬರ್ ಸುದ್ದಿ) ‘ಚಾರ್ಮಾಡಿ ಘಾಟ್‌ನಲ್ಲಿ 13 ಕಡೆ ಗುಡ್ಡ ಕುಸಿತದಿಂದ ರಸ್ತೆ ಮಾರ್ಗ ಬಂದ್‌ ಆಗಿದೆ. ಹಾಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೂ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಅಣ್ಣಾಮಲೈ ತಿಳಿಸಿದ್ದಾರೆ. ಕುಸಿದಿರುವ ಮಣ್ಣನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ಮತ್ತು ಹೆದ್ದಾರಿ ಪ್ರಾಧಿಕಾರದ ಕಾರ್ಮಿಕರು ಶ್ರಮಿಸುತ್ತಿದ್ದಾರೆ. 

ಸೋಮವಾರ ರಾತ್ರಿಯಿಂದ ರಸ್ತೆಯಲ್ಲಿ ನಿಂತಿರುವ ವಾಹನಗಳನ್ನು ಘಾಟ್‌ನಿಂದ ಹೊರತರುವ ಕಾರ್ಯ ನಡೆಯುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು, ಸ್ವಯಂಸೇವಕರು ಪ್ರಯಾಣಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ. 

ಈ ಮಾರ್ಗದ ಬದಲಾಗಿ ಕುದುರೆಮುಖ ಮತ್ತು ಕಾರ್ಕಳ ಮಾರ್ಗ ಬಳಸಲು ಎಸ್‌ಪಿ ಅವರು ಸೂಚಿಸಿದ್ದಾರೆ. 

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا