Urdu   /   English   /   Nawayathi

ಬಂಟ್ವಾಳದಲ್ಲಿ ಮಾರಾಮಾರಿ: ತಲವಾರು ಹಿಡಿದು ತಿರುಗಾಡಿದ ಸಿನಿಮಾ ನಟ

share with us

ಮಂಗಳೂರು: 11 ಜೂನ್ (ಫಿಕ್ರೋಖಬರ್ ಸುದ್ದಿ) ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ವೇಳೆ ತುಳು ಸಿನಿಮಾ ನಟ ಸುರೇಂದ್ರ ಭಂಡಾರಿ ಸೋಮವಾರ ತಲವಾರು ಹಿಡಿದು ತಿರುಗಾಡುತ್ತಾ ಎದುರಾಳಿಗಳನ್ನು ಬೆದರಿಸಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಬಜರಂಗದಳದ ಕಾರ್ಯಕರ್ತ ಭುವಿತ್ ಶೆಟ್ಟಿ ನೇತೃತ್ವದ ಗುಂಪು ಬಡ್ಡಕಟ್ಡೆಯ ಕ್ಷೌರದಂಗಡಿಗೆ ಭಾನುವಾರ ನುಗ್ಗಿ ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಸುರೇಂದ್ರ ಭಂಡಾರಿ ನೇತೃತ್ವದ ಗುಂಪು ಭುವಿತ್ ಶೆಟ್ಟಿ ಗುಂಪಿನವರ ಮೇಲೆ‌ ಸೋಮವಾರ ಹಲ್ಲೆಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಸುರೇಂದ್ರ ತಲವಾರು ಹಿಡಿದು ತಿರುಗಾಡುತ್ತಾ ಬೆದರಿಕೆ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. 

ಈ ಕುರಿತು 'ಪ್ರಜಾವಾಣಿ' ಜೊತೆ ಮಾತನಾಡಿದ ದಕ್ಷಿಣ ಕನ್ನಡ ಎಸ್ ಪಿ ಡಾ.ಬಿ.ಆರ್.ರವಿಕಾಂತೇಗೌಡ, ' ಭಾನುವಾರ ಭುವಿತ್ ಶೆಟ್ಟಿ ತಂಡ ಸುರೇಂದ್ರ ಭಂಡಾರಿ ಸಂಬಂಧಿಯ ಮೇಲೆ ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಸುರೇಂದ್ರ ಭಂಡಾರಿ ಕೆಲವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು ಮಾಡಿದ್ದೇವೆ. ಎರಡೂ ಗುಂಪುಗಳ ಸದಸ್ಯರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ' ಎಂದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا