Urdu   /   English   /   Nawayathi

ಅಮೆರಿಕದ ರಕ್ಷಣಾ ತಂತ್ರಾಂಶಕ್ಕೆ ಕನ್ನ ಹಾಕಿದ ಚೀನಾ ಹ್ಯಾಕರ್ಸ್‍ಗಳು..!

share with us

ವಾಷಿಂಗ್ಟನ್: 10 ಜೂನ್ (ಫಿಕ್ರೋಖಬರ್ ಸುದ್ದಿ) ಸಾಗರದಾಳದ ಕ್ಷಿಪಣಿ ದಾಳಿಯನ್ನು ತಡೆಯಬಲ್ಲ ಸಾಮಥ್ರ್ಯವುಳ್ಳ ಅಮೆರಿಕದ ಅತ್ಯಾಧುನಿಕ ಸಬ್‍ಮೆರಿನ್ ನಿರ್ಮಾಣದ ಹಾಗೂ ಅತ್ಯಂತ ಸೂಕ್ಷ್ಮ ದಾಖಲೆಗಳು ಮತ್ತು ತಂತ್ರಾಂಶಗಳಿಗೆ ಚೈನಾ ಹ್ಯಾಕರ್ಸ್‍ಗಳು ಕನ್ನ ಹಾಕಿದ್ದಾರೆ. ಶತ್ರು ರಾಷ್ಟ್ರಗಳ ಸವಾಲನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ 2020ರ ವೇಳೆಗೆ ಅಮೆರಿಕ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಸೂಪರ್ ಸಾನಿಕ್ ಆ್ಯಂಟಿಶಿಪ್ ಕ್ಷಿಪಣಿಯನ್ನು ತಯಾರಿಸಲು ಸನ್ನದ್ಧವಾಗಿತ್ತು.

ಆದರೆ, ಚೈನಾ ಸರ್ಕಾರದ ಹ್ಯಾಕರ್ಸ್‍ಗಳು ಅಮೆರಿಕದ ಈ ಮಹತ್ವಾಕಾಂಕ್ಷೆ ಯೋಜನೆಯ ದತ್ತಾಂಶಗಳನ್ನು ಹ್ಯಾಕ್ ಮಾಡಿ ಕಳುವು ಮಾಡಿದ್ದಾರೆ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಸಬ್‍ಮೆರಿನ್ ತಂತ್ರಾಂಶದ ಜತೆಗೆ ಸಿ ಡ್ರಾಗನ್ ಯೋಜನೆಯ ಹಲವಾರು ರಹಸ್ಯ ದಾಖಲೆಗಳನ್ನು ಚೀನಾ ಹ್ಯಾಕರ್ಸ್‍ಗಳು ಕಳುವು ಮಾಡಿರುವುದನ್ನು ಕೆಲ ಅಮೆರಿಕ ಅಧಿಕಾರಿಗಳು ದೃಢೀಕರಿಸಿದ್ದಾರೆ. ಯೋಜನೆಯ ನೇತೃತ್ವ ವಹಿಸಿದ್ದ ಗುತ್ತಿಗೆದಾರರ ಕಂಪ್ಯೂಟರ್‍ಗಳನ್ನು ಚೀನಿ ಹ್ಯಾಕರ್ಸ್‍ಗಳು ಹ್ಯಾಕ್ ಮಾಡಿ ಮಹತ್ವಾಕಾಂಕ್ಷೆ ಯೋಜನೆಯ ಇಡೀ ನೀಲಿ ನಕ್ಷೆಯನ್ನೇ ತಮ್ಮ ಕೈ ವಶ ಮಾಡಿಕೊಂಡಿದ್ದಾರೆ.
ಪೂರ್ವ ಏಷ್ಯಾದಲ್ಲಿ ತನ್ನ ಸಾಮಥ್ರ್ಯವನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಚೀನಾ ಹಲವಾರು ವರ್ಷಗಳಿಂದ ಅಮೆರಿಕ ಸೇನೆಯ ತಂತ್ರಾಂಶಗಳನ್ನು ಕಳುವು ಮಾಡಲು ಹೊಂಚು ಹಾಕಿ ಕುಳಿತಿದ್ದು, ತನ್ನ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಪತ್ರಿಕೆ ಹೇಳಿದೆ.

ಚೀನಾದ ಬೆಂಬಲ ಪಡೆದಿದ್ದ ಅಣು ರಾಷ್ಟ್ರ ಉತ್ತರ ಕೊರಿಯಾವನ್ನು ಟ್ರಂಪ್ ಆಡಳಿತ ಅಣ್ವಸ್ತ್ರಗಳನ್ನು ನಾಶ ಪಡಿಸುವಂತೆ ಉತ್ತರ ಕೊರಿಯಾಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಚೀನಾ ಹ್ಯಾಕರ್ಸ್‍ಗಳು ಈ ದುಷ್ಕøತ್ಯವೆಸಗಿದ್ದಾರೆ. ಚೀನಾದ ಈ ದುರ್ನಡತೆ ವಿರುದ್ಧ ಕೆಂಗಣ್ಣು ಬೀರಿರುವ ದೊಡ್ಡಣ್ಣ ಅಮೆರಿಕ, ತಂತ್ರಾಂಶ ಕಳವು ಪ್ರಕರಣವನ್ನು ಎಫ್‍ಬಿಐ ತನಿಖೆಗೆ ವಹಿಸಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا