Urdu   /   English   /   Nawayathi

ಎಚ್‌ಡಿಕೆ ವಿರುದ್ಧ ಮತ್ತೆ ತೊಡೆ ತಟ್ಟಲು ಮುಂದಾಗ ಸಿ.ಪಿ.ಯೋಗೇಶ್ವರ್‌!

share with us

ಚನ್ನಪ್ಪಟ್ಟಣ: 03 ಜೂನ್ (ಫಿಕ್ರೋಖಬರ್ ಸುದ್ದಿ) 'ಪಕ್ಷದ ಆದೇಶಕ್ಕಾಗಿ ಎದುರು ನೋಡುತ್ತಿದ್ದು, ಸೂಚಿಸಿದರೆ ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಸಿದ್ದ' ಎಂದು ಮಾಜಿ ಸಚಿವ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ 'ನಾನು ಕುಮಾರಸ್ವಾಮಿ ಅವರ ಕುಟುಂಬದ ಎದುರು 3 ಚುನಾವಣೆ ಎದುರಿಸಿದ್ದೇನೆ ಅನಿತಾ ಕುಮಾರಸ್ವಾಮಿ ಅವರನ್ನೂ ಸೋಲಿಸಿದ್ದೇನೆ' ಎಂದರು. 

'ಸೋಲಿನ ಬಗ್ಗೆ ಮಾತನಾಡಿ ಎಚ್‌ಡಿಕೆ ಕಣ್ಣೀರಿನ ಎದುರು ನನ್ನ ನೀರಾವರಿ ಯೋಜನೆ ಕೊಚ್ಚಿ ಹೋಗಿದೆ' ಎಂದರು. 

'ಅಧಿಕಾರ ಇರಲಿ ಇರದೇ ಇರಲಿ ನಾನು ಕ್ಷೇತ್ರದಲ್ಲೇ ಇರುತ್ತೇನೆ' ಎಂದರು.

'ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕುಮಾರಸ್ವಾಮಿ ಅವರು ಹೇಳಿದಂತೆ ಸರ್ಕಾರ ಪ್ರನಾಳ ಶಿಶು ಅಲ್ಲ. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ದೇವೇಗೌಡರು ಮಂತ್ರದಂಡದಿಂದ ಹುಟ್ಟು ಹಾಕಿದ ಪ್ರನಾಳ ಶಿಶು' ಎಂದರು.
 

ರಾಮನಗರ ಮತ್ತು ಚನ್ನಪಟ್ಟಣ 2 ಕ್ಷೇತ್ರದಲ್ಲಿ ಎಚ್‌ಡಿಕೆ ಗೆದ್ದಿದ್ದರು. ಆ ಪೈಕಿ ತಮ್ಮ ಭದ್ರ ಕೋಟೆಯಾಗಿರುವ ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನಲೆಯಲ್ಲಿ ಉಪಚುನಾವಣೆ ಎದುರಾಗಿದೆ.

ಕೇತ್ರದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ಪ್ರಬಲ ಸ್ಪರ್ಧೆ ಒಡ್ಡಿತ್ತು. ಸದ್ಯದ ಬದಲಾದ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ಗೆ ಬೆಂಬಲ ನೀಡುವ ಸಾಧ್ಯತೆಗಳಿದ್ದು  ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಸ್ಪರ್ಧೆ ಏರ್ಪಡಲಿದೆ. 

ಬಿಜೆಪಿ ಕ್ಷೇತ್ರದಲ್ಲಿ ಅಷ್ಟೇನೂ ಪ್ರಾಬಲ್ಯ ಹೊಂದಿಲ್ಲ ಮಾತ್ರವಲ್ಲದೆ ಈ ಬಾರಿ ಠೇವಣಿಯನ್ನೂ ಕಳೆದುಕೊಂಡಿತ್ತು. ಒಕ್ಕಲಿಗ ನಾಯಕರಾಗಿರುವ ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡಿ ಪ್ರಬಲ ಸ್ಪರ್ಧೆ ನೀಡಲು ಬಿಜೆಪಿ ಮುಂದಾಗುವ ಎಲ್ಲಾ ಸಾಧ್ಯತೆಗಳಿವೆ.  

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا