Urdu   /   English   /   Nawayathi

ಗೃಹ ರಕ್ಷಕರು ಶಿಸ್ತು ಪಾಲಿಸುವುದು ಅಗತ್ಯ

share with us

ಕಾರವಾರ: 07 ಮೇ (ಫಿಕ್ರೋಖಬರ್ ಸುದ್ದಿ) ಕಾರವಾರದ ಜಿಲ್ಲಾ ಸಶಸ್ತ್ರ ವೀಸಲು ಪಡೆ ಕವಾಯತು ಮೈದಾನದಲ್ಲಿ ನೂತನವಾಗಿ ಆಯ್ಕೆಯಾದ ಗೃಹರಕ್ಷಕರಿಗೆ ವಾರ್ಷಿಕ ತರಬೇತಿಯ ಸಮಾರೋಪ ಸಮಾರಂಭದ ಕುರಿತು ಹೆಚ್ಚುವರಿ ಪೋಲೀಸ್ ಅಧೀಕ್ಷಕ ಡಾ|| ಗೋಪಾಲ್ ಬ್ಯಾಕೋಡ್ ಅವರು ಕೆಲವು ನುಡಿಮುತ್ತುಗಳನ್ನು ನುಡಿದರು. ಸಮವಸ್ತ್ರ ಧರಿಸಿದಾಗ ನಿಮ್ಮ ವರ್ತನೆಯನ್ನು ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತದೆ. ಹಾಗಾಗಿ ಗೃಹರಕ್ಷಕರು ಸಮವಸ್ತ್ರಕ್ಕೆ ಗೌರವ ತರುವಂತೆ ಕಾರ್ಯ ನಿರ್ವಹಿಸಬೇಕು. ಕೆಲವೊಮ್ಮೆ ಕರ್ತವ್ಯ ನಿರ್ವಹಿಸುವಾಗ ಅತ್ಯಂತ ಕಠಿಣ ಪರಿಸ್ಥಿತಿಗಳು ಎದುರಾಗಬಹುದು. ಅನ್ನ, ನೀರು ಸಹ ಸಿಗದೇ ಇರಬಹುದು. ಅಂತಹ ಸಂದರ್ಭವನ್ನು ಎದುರಿಸಲು ಗೃಹರಕ್ಷಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ನಡೆಯುವ ಈ ಚುನಾವಣೆ ಗೃಹರಕ್ಷಕರ ಮುಂದಿರುವ ದೊಡ್ಡ ಸವಾಲು. ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಲು ಗೃಹರಕ್ಷಕರು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು. 
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا