Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಬೆಂಗಳೂರು: 28 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಅಕ್ರಮ ಗಣಿಗಾರಿಕೆಯಿಂದ ಕಳಂಕಿತರಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಪ್ರಚಾರ ಕಣದಿಂದ ಹಿಂದಕ್ಕೆ ಕಳುಹಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದ ಜನಾರ್ದನ ರೆಡ್ಡಿ ಅವರ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗಿ ಬಿಜೆಪಿಗೆ ಭಾರಿ ತಲೆನೋವು ತಂದಿಟ್ಟಿತ್ತು. ಕಾಂಗ್ರೆಸ್ ಕೂಡ ಇದೇ ವಿಚಾರವನ್ನು ಬಿಜೆಪಿ ವಿರುದ್ದ ಅಸ್ತ್ರವನ್ನಾಗಿ ಬಳಸಿತ್ತು.
ಅಮಿತ್ ಶಾ ಅವರ ಸೂಚನೆ ಮೇರೆಗೆ ಜನಾರ್ದನ ರೆಡ್ಡಿ ಅವರು ಬೆಂಗಳೂರಿಗೆ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ.
ರೆಡ್ಡಿ ಕಳೆದ ಒಂದು ವಾರದಿಂದ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸಿದ್ದರು. ನಿನ್ನೆಯಿಂದ ಅವರು ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಅಮಿತ್ ಶಾ ಅವರು ಬಳ್ಳಾರಿ ರೋಡ್ ಶೋ ಕೈ ಬಿಟ್ಟು ರೆಡ್ಡಿಗೆ ಶಾಕ್ ನೀಡಿದ್ದರು. ನಾಳೆ ಚಿತ್ರದುರ್ಗದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಶಾ ಅವರು ಪಾಲ್ಗೊಳ್ಳಲಿದ್ದು, ಆ ಕಾರ್ಯಕ್ರಮದಿಂದ ರೆಡ್ಡಿ ದೂರ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಅಮಿತ್ ಶಾ ರಾಜ್ಯದಲ್ಲಿ ಪ್ರಚಾರ ಆರಂಭಿಸುವ ಮುನ್ನ 'ಜನಾರ್ದನ ರೆಡ್ಡಿಗೂ ನಮಗೂ ಯಾವುದೇ ಸಂಬಂಧ ಇಲ್ಲ' ಎಂದಿದ್ದರು. ಆ ಬಳಿಕವೂ ರೆಡ್ಡಿ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಅವರು 'ಜನಾರ್ದನ ರೆಡ್ಡಿ ನಮ್ಮ ಸ್ಟಾರ್ ಪ್ರಚಾರಕ ಅಲ್ಲ. ಅವರು ಸ್ನೇಹಿತರ ಪರ ಪ್ರಚಾರ ನಡೆಸುತ್ತಾರೆ ಅಷ್ಟೇ' ಎಂದಿದ್ದರು.
ಉ, ವಾ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |