Urdu   /   English   /   Nawayathi

ಮೋದಿ ವಿದೇಶದಲ್ಲಿ ವಾಚಾಳಿ, ಸ್ವದೇಶದಲ್ಲಿ ಮೌನಿ ಬಾಬಾ: ಉದ್ಧವ್‌

share with us

ಮುಂಬಯಿ: 19 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲಿ  ಹೆಚ್ಚು  ಮಾತನಾಡುತ್ತಾರೆ; ಆದರೆ ಸ್ವದೇಶದಲ್ಲಿ ಮೌನಿ ಬಾಬಾ ಆಗಿರುತ್ತಾರೆ ಎಂದು ಶಿವಸೇನೆ ಲೇವಡಿ ಮಾಡಿದೆ. ಸಹಸ್ರಾರು ಕೋಟಿ ಬ್ಯಾಂಕ್‌ ಸಾಲವನ್ನು  ಸುಸ್ತಿ ಮಾಡಿ ಭಾರತದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್‌ ಮಲ್ಯ ಲಂಡನ್‌ನಲ್ಲಿ ಆಸರೆ ಪಡೆದಿರುವ ಹೊರತಾಗಿಯೂ ಅಲ್ಲಿ ಚೆನ್ನಾಗಿ ಭಾಷಣ ಬಿಗಿದಿರುವ ಮೋದಿ ಅವರು ಅಲ್ಲಿಂದ ಈಗಿನ್ನು  ಬರಿಗೈಯಲ್ಲಿ ಮರಳಲಿದ್ದಾರೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಕಟಕಿಯಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ ಮತ್ತು ಗಾಂಧಿ ಕುಟುಂಬದ ಬಗ್ಗೆ ತೀವ್ರವಾದ ಅಸಮಾಧಾನ ಇರಬಹುದು; ಆದರೆ ಅವರು ವಿದೇಶೀ ನೆಲದಲ್ಲಿ ಭಾರತದ ಆಂತರಿಕ ವಿಷಯಗಳನ್ನು ಮಾತನಾಡುವುದು ಸರಿಯಲ್ಲ; ಹಾಗೆ ಮಾಡುವುದು ಅವರ ಹುದ್ದೆಯ ಘನತೆಗೂ ತಕ್ಕುದಾದುದಲ್ಲ ಎಂದು ಉದ್ಧವ್‌ ಹೇಳಿದರು. 

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನರೇಂದ್ರ ಮೋದಿ ಅವರಿಗೆ "ನೀವು ಹೆಚ್ಚು ಮಾತನಾಡಬೇಕು, ಮತು ಸರಿಯಾದ ಹೊತ್ತಿನಲ್ಲಿ ಸರಿಯಾದುದನ್ನು ಮಾತನಾಡಬೇಕು ಎಂದು ಸಲಹೆ ನೀಡಿದ್ದರು. ಹಿಂದೆ ಇದೇ ಸಲಹೆಯನ್ನು ಮೋದಿ ಅವರು ಆಗಿನ ಪ್ರಧಾನಿ ಸಿಂಗ್‌ಗೆ ನೀಡಿದ್ದರು. ಈಗ ಈ ಸಲಹೆ ಮೋದಿ ಅವರಿಗೆ ಅನ್ವಯವಾಗುತ್ತದೆ ಎಂದು ಸಿಂಗ್‌ ಹೇಳಿದ್ದಾರೆ' ಎಂಬುದಾಗಿ ಉದ್ಧವ್‌ ಠಾಕ್ರೆ ಅವರು ತಮ್ಮ ಪಕ್ಷದ "ಸಾಮ್ನಾ' ಮುಖವಾಣಿಯ ಸಂಪಾದಕೀಯದಲ್ಲಿ ಬರೆದಿದ್ದಾರೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا