Urdu   /   English   /   Nawayathi

ರಾಜ್ಯಸಭೆ ಸದಸ್ಯರಾಗಿ ಅರುಣ್‌ ಜೇಟ್ಲಿ ಪ್ರಮಾಣ ವಚನ ಸ್ವೀಕಾರ

share with us

ನವದೆಹಲಿ: 15 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ರಾಜ್ಯಸಭೆ ಸದಸ್ಯರಾಗಿ ಮುಂದಿನ ಆರು ವರ್ಷಗಳ ಅವಧಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಮೂತ್ರಕೋಶ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಅರುಣ್‌ ಜೇಟ್ಲಿ ಅವರು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರ ಕಚೇರಿಯಲ್ಲಿ ಅಧಿಕಾರಿ ಸ್ವೀಕರಿಸಿದರು. ಉತ್ತರ ಪ್ರದೇಶದಿಂದ ಹಿಂದಿನ ತಿಂಗಳು ಸಂಸತ್‌ನ ಮೇಲ್ಮನೆಗೆ ಆಯ್ಕೆಯಾಗಿದ್ದ 65 ವರ್ಷ ವಯೋಮಾನದ ಸಚಿವ ಜೇಟ್ಲಿ ಅವರ ಅನಾರೋಗ್ಯದ ಕಾರಣ, ವಿಶೇಷ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಉತ್ತರ ಪ್ರದೇಶವನ್ನು ಪ್ರತಿನಿಧಿಸುವ ರಾಜ್ಯಸಭೆ ಸದಸ್ಯನಾಗಿ 2018ರ ಏ. 15ರಂದು ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಅರುಣ್‌ ಜೇಟ್ಲಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸಚಿವರಾದ ಅನಂತ್ ಕುಮಾರ್, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಹರ್ದೀಪ್ ಎಸ್. ಪುರಿ, ವಿಜಯ್ ಗೋಯಲ್ ಮತ್ತು ಶಿವ ಪ್ರತಾಪ್ ಶುಕ್ಲಾ, ವಿರೋಧ ಪಕ್ಷದ ಮುಖಂಡ ಗುಲಾಮ್ ನಬಿ ಆಜಾದ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಜ್ಯಸಭೆ ಸದಸ್ಯರಾದ ಭೂಪೇಂದ್ರ ಯಾದವ್, ಜಗದಾಂಬಿಕಾ ಪಾಲ್, ಕಾನ್ರಾಡ್ ಸಂಗ್ಮಾ (ಪ್ರಸ್ತುತ ಮೇಘಾಲಯ ಮುಖ್ಯಮಂತ್ರಿ) ಮತ್ತು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್‌. ಯಡಿಯೂರಪ್ಪ ಇದ್ದರು.

ಚುನಾವಣೆ ನಂತರ ರಾಜ್ಯಸಭೆಯ ನಾಯಕರನ್ನು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಜೇಟ್ಲಿ ಅವರ ಅನಾರೋಗ್ಯದ ಕಾರಣ ಮೇಲ್ಮನೆಯ ಇತರ ಸದಸ್ಯರ ಜತೆಗೆ ಪ್ರಮಾಣವಚನ ಸ್ವೀಕರಿಸಿರಲಿಲ್ಲ.

ಏ.9ರಂದು ಎಐಐಎಂನಲ್ಲಿ ಡಯಾಲಿಸಿಸ್‌ಗೆ ಒಳಗಾಗಿದ್ದ ಜೇಟ್ಲಿ ಅವರು ವಿಶ್ರಾಂತಿಯಲ್ಲಿದ್ದರು. ಏ. 2ರಿಂದ ಉತ್ತರ ಬ್ಲಾಕ್‌ನ ಕಚೇರಿಗೆ ಭೇಟಿ ನೀಡಿರಲಿಲ್ಲ. ಈ ಹಿಂದೆ ಅವರು ಹೃದಯ ಶಸ್ತ್ರಚಿಕಿತ್ಸಗೆ ಒಳಗಾಗಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ಸಚಿವ ಅರಣ್‌ ಜೇಟ್ಲಿ ಅವರು ಪುಸ್ತಕದಲ್ಲಿ ಸಹಿಮಾಡಿದರು –ಚಿತ್ರ: ಪಿಟಿಐ

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا