Urdu   /   English   /   Nawayathi

ಅಯೋಧ್ಯೆ ವಿವಾದ : ನ್ಯಾಯ ನಿರ್ಣಯ ಮತ್ತಷ್ಟು ವಿಳಂಬ..?

share with us

ನವದೆಹಲಿ: 24 ಮಾರ್ಚ್ (ಫಿಕ್ರೋಖಬರ್ ಸುದ್ದಿ) ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಎಂದೇ ಪರಿಗಣಿಸಲಾದ ಅಯೋಧ್ಯೆ ಭೂ ವಿವಾದ ಪ್ರಕರಣದ ನ್ಯಾಯ ನಿರ್ಣಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಮಸೀದಿಯು ಇಸ್ಲಾಂ ಧರ್ಮದ ಅಗತ್ಯ ಭಾಗವಲ್ಲ ಎಂಬ ಸುಪ್ರೀಂಕೋರ್ಟ್‍ನ 1994ರ ನಿರ್ಧಾರವನ್ನು ಸಂವಿಧಾನ ಪೀಠದಿಂದ ಮರುಪರಿಶೀಲನೆ ಮಾಡುವ ಬಗ್ಗೆ ಮೊದಲ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಸರ್ವೋಚ್ಛ ನ್ಯಾಯಾಲಯ ನಿನ್ನೆ ಹೇಳಿದ್ದು, ಈ ವಿವಾದದ ಇತ್ಯರ್ಥ ವಿಳಂಬವಾಗಲಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಈ ಕುರಿತು ನಿನ್ನೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. 1994ರ ಇಸ್ಮಾಯಿಲ್ ಫಾರೂಖಿ ಪ್ರಕರಣದಲ್ಲಿ ಮಸೀದಿಯು ಇಸ್ಲಾಂ ಧರ್ಮ ಆಚರಣೆಯ ಒಂದು ಅಗತ್ಯ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ನಿರ್ಧಾರ ಕುರಿತು ಐವರು ನ್ಯಾಯಾಧೀಶರ ಪೀಠದಿಂದ ಮರು ಪರಿಶೀಲನೆ ಮಾಡಬೇಕಾಗಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೇ ಈ ವಿವಾದವನ್ನು ಬೃಹತ್ ಪೀಠಕ್ಕೆ ವರ್ಗಾಯಿಸಬೇಕೆಂಬ ಮನವಿಯನ್ನೂ ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದಿತ ಸ್ಥಳದ ಸುಮಾರು 3 ಎಕರೆಗಳ ಭೂಮಿಯ ಒಡೆತನಕ್ಕಾಗಿ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವೆ 70 ವರ್ಷಗಳಿಂದಲೂ ಕಾನೂನು ಸಮರ ನಡೆಯುತ್ತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا