Urdu   /   English   /   Nawayathi

10 ಕೋಟಿ ಖರ್ಚು ಮಾಡಿ ಗೆದ್ದ ನಂತರ 20 ಕೋಟಿ ವಸೂಲಿ ಮಾಡಲಾಗುತ್ತೆ’

share with us

ಬೆಂಗಳೂರು: 04 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸಮಾಜದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತೇವೆ ಎಂಬುದು ಸುಳ್ಳು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ತಿಳಿಸಿದ್ದಾರೆ. ನಗರದಲ್ಲಿ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗ ಆಯೋಜಿಸಿದ್ದ ನಮ್ಮ ಕ್ಷೇತ್ರ, ನಮ್ಮ ಕನಸು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ಭ್ರಷ್ಟಾಚಾರ ತೊಡೆದು ಹಾಕುವುದಾಗಿ ಹೇಳಿದ್ದಾರೆ. ಭ್ರಷ್ಟಾಚಾರ ತಡೆಯಲು ದುರ್ಗಿ ಅವತಾರ ಎತ್ತಿರುವುದಾಗಿ ಹೇಳಿದ್ದಾರೆ.

ಚುನಾವಣೆಯಲ್ಲಿ 10 ಕೋಟಿ ಖರ್ಚು ಮಾಡಿ ಗೆದ್ದ ನಂತರ 20 ಕೋಟಿ ವಸೂಲಿ ಮಾಡಲಾಗುತ್ತದೆ. ಪಕ್ಷದ ನಿಧಿಗಾಗಿ ದೇಣಿಗೆ ನೀಡುವಂತೆ ಕೇಳಲಾಗುತ್ತದೆ. ಇದು ಎಲ್ಲಾ ಪಕ್ಷಗಳಲ್ಲೂ ಇದೆ. ನಾವು ಸಂಪಾದಿಸಿದ ಆಸ್ತಿಯನ್ನು ಹಂಚಿಕೊಳ್ಳಲು ಕಿತ್ತಾಡುವಂತೆ ನಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಕಿತ್ತಾಡುತ್ತಾರೆ. ಇದು ಚುನಾವಣಾ ಭ್ರಷ್ಟಾಚಾರಕ್ಕೆ ನಿದರ್ಶನ ಎಂದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಅಧಿಸೂಚನೆ ಪ್ರಕಟವಾಗುವುದು ಮಾತ್ರ ಬಾಕಿ ಇದೆ. ನಾವೆಲ್ಲರೂ ಸ್ಪರ್ಧೆಗೆ ಇಳಿದಿದ್ದೇವೆ. ಆದರೆ ಜನರು ಮಾತ್ರ ಹಲವು ಆಯ್ಕೆಯ ಆಧಾರದ ಮೇಲೆ ಮತ ಚಲಾಯಿಸುತ್ತಾರೆ. ಜನರ ನಿದ್ದೆಯನ್ನು ಕೆಡಿಸುವುದಕ್ಕೆ ನಾವು ಇಳಿದಿದ್ದೇವೆ ಎಂದು ಹೇಳಿದರು. ಮಲೆನಾಡು ಭಾಗದಲ್ಲಿ ಗೆದ್ದರೆ ವಿಧಾನಸಭೆ, ಸೋತರೆ ತೋಟ ಎಂಬ ಭಾವನೆ ಇದೆ. ನಮ್ಮದು ಪರಿಪೂರ್ಣ ಪ್ರಜಾಪ್ರಭುತ್ವವಲ್ಲ. ಚುನಾವಣೆ ಎಂದರೆ, ಭ್ರಷ್ಟಾಚಾರ. ನಾನು ಪಾರ್ಟಿಗೆ ಹಗ್ಗ ಕಟ್ಟಿ ಓಡಾಡುವನಲ್ಲ, ಕೆಲವೊಮ್ಮೆ ಪಾರ್ಟಿಯ ಹಗ್ಗ ಬಿಚ್ಚಿ ಓಡಾಡಿದ್ದೇನೆ ಎಂದು ರಮೇಶ್‍ಕುಮಾರ್ ಹೇಳಿದರು.

ಕ್ಷೇತ್ರಕ್ಕೆ ಹೋದರೆ ಜನರು ನಮ್ಮ ಕೈ ನೋಡುತ್ತಾರೆ. ದುಡ್ಡಿನ ಬ್ಯಾಗ್ ಇದೆಯೇ ಇಲ್ಲವೇ ಎಂಬುದನ್ನು ನೋಡುತ್ತಾರೆ. ಬರೀ ಕೈ ನೋಡಿದ ಮೇಲೆ ಜನರೇ ಮರೆಯಾಗುತ್ತಾರೆ. ಇದನ್ನು ಜನರೂ ಬಿಡಬೇಕು ಎಂದರು. ಕಿಮ್ಮನೆ ರತ್ನಾಕರ್ ಸಚಿವರಾಗಿದ್ದಾಗ ನಾನು ಗೂರ್ಖನಾಗಿದ್ದೆ. ವಿಧಾನಸಭೆಗೆ ಬ್ಯಾಗ್ ತಗಲಾಕಿಕೊಂಡು ಬಂದು ಹೋಗುತ್ತಿದ್ದೆ. ಈಗ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ಕಿಮ್ಮನೆ ರತ್ನಾಕರ್ ಅವರು ಗೂರ್ಖನಾಗಿದ್ದಾರೆ ಎಂದು ಹೋಲಿಸಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉಪಸ್ಥಿತರಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا