Urdu   /   English   /   Nawayathi

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಒಬ್ಬ ಪೊಲೀಸ್ ಅಧಿಕಾರಿಗೂ ಸಿಕ್ಕಿಲ್ಲ ರಾಷ್ಟ್ರಪತಿ ಪದಕ: ಕಾರಣ ಏನು?

share with us

ಬೆಂಗಳೂರು: 26 ಜನುವರಿ (ಫಿಕ್ರೋಖಬರ್ ಸುದ್ದಿ) ಇತಿಹಾಸಿದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ರಾಜ್ಯದ ಒಬ್ಬ ಪೊಲೀಸ್ ಅಧಿಕಾರಿಗೂ ರಾಷ್ಟ್ರಪತಿ ಪದಕ ಲಭ್ಯವಾಗಿಲ್ಲ, ಗಣ ರಾಜ್ಯೋತ್ಸವ ಅಂಗವಾಗಿ  855 ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಭಾಜನರಾಗಿದ್ದಾರೆ. ವಿವಿಧ ವರ್ಗಗಳ ಅಡಿ ಪೊಲೀಸ್ ಅಧಿಕಾರಿಗಳ ಹೆಸರನ್ನು ಗೃಹ ಇಲಾಖೆ ಶಿಫಾರಸು ಮಾಡಬೇಕಾಗಿತ್ತು,  ಆದರೆ ಹೆಸರುಗಳನ್ನು ಶಿಫಾರಸು ಮಾಡುವಲ್ಲಿ ಗೃಹ ಇಲಾಖೆ ವಿಳಂಬ ಮಾಡಿದೆ ಎಂದು ಮೂಲಗಳು ತಿಳಿಸಿವೆ. ತಮ್ಮನ್ನು ರಾಷ್ಟ್ರಪತಿ ಪದಕಕ್ಕೆ ಪರಿಗಣಿಸುವಂತೆ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಕೇಂದ್ರ ಆಡಳಿತಾತ್ಮತ ಟ್ರಿಬ್ಯೂನಲ್ ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಹೆಸರುಗಳನ್ನು ಶಿಫಾರಸು ಮಾಡಲು ವಿಳಂಬವಾಗಿದೆ. ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 31 ರೊಳಗೆ ಹೆಸರುಗಳ ಶಿಫಾರಸು ಮಾಡಲು ಅಂತಿಮ ಗಡುವು ಆಗಿತ್ತು. ಆದರೆ ಗೃಹ ಇಲಾಖೆ ಮಾಡಿದ ನಿರ್ಲಕ್ಷ್ಯದಿಂದಾಗಿ ಯಾವೊಬ್ಬ ಪೊಲೀಸ್ ಅಧಿಕಾರಿಯೂ ಈ ಬಾರಿ  ರಾಷ್ಚ್ರಪತಿ ಪದಕ ಪಡೆದಿಲ್ಲ, ಆರ್ ಪಿ ಶರ್ಮಾ ವಿರುದ್ಧ ಇಲಾಖೆಯ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಅವರ ಹೆಸರನ್ನು ಶಿಫಾರಸು ಮಾಡಿರಲಿಲ್ಲ, ಅದನ್ನು ಪ್ರಶ್ನಿಸಿ ಆರ್ ಪಿ ಶರ್ಮಾ ಮೇಲ್ಮನವಿ ಸಲ್ಲಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا