Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಉಡುಪಿಯ 'ಸಿಂಗಂ' ಎಸ್ಪಿ ಅಣ್ಣಾಮಲೈ ವರ್ಗಾವಣೆ ಸುದ್ದಿ: ಸ್ಪಷ್ಟನೆ

ಉಡುಪಿಯ 'ಸಿಂಗಂ' ಎಸ್ಪಿ ಅಣ್ಣಾಮಲೈ ವರ್ಗಾವಣೆ ಸುದ್ದಿ: ಸ್ಪಷ್ಟನೆ

 

ಇವರು ಕಾನೂನು ಬಾಹಿರ ಚಟುವಟಿಕೆ ನಡೆಸುವ ಸಮಾಜಘಾತುಕರಿಗೆ ಸಿಂಹಸ್ವಪ್ನ, 15 Dec(Fikrokhabar./soruces) ಸಾಮಾನ್ಯ ಜನರ ಪಾಲಿನ ಆಶಾಕಿರಣ, ಯುವಕರಿಗೆ ರೋಲ್ ಮಾಡೆಲ್, ತನ್ನ ನಿರ್ಭೀತಿ ಕಾರ್ಯದಕ್ಷತೆಯಿಂದ ಜಿಲ್ಲೆಯಲ್ಲಿ 'ಸಿಂಗಂ' ಎಂದೇ ಹೆಸರು ಪಡೆದಿರುವ ಉಡುಪಿ ಜಿಲ್ಲೆಯ ಯುವ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ (ಐಪಿಎಸ್).

ನಮ್ಮ ದೇಶದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಿಗುವ ವರ್ಗಾವಣೆಯೆನ್ನುವ ಒತ್ತಡದ ಪಿತೂರಿಗೆ ಅಣ್ಣಾಮಲೈ ಕೂಡಾ ಹೊರತಾಗಿಲ್ಲ ಎನ್ನುವ ಸುದ್ದಿ ಕರಾವಳಿ ಭಾಗದಲ್ಲಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಸದ್ಯ ಸಖತ್ ಆಗಿ ಸುದ್ದಿಯಾಗುತ್ತಿದೆ. ಇದಕ್ಕೆ ಸದ್ಯ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಇದೆಲ್ಲಾ ಗಾಳಿಸುದ್ದಿ. ಇದರಲ್ಲಿ ಏನೂ ನಿಜಾಂಶವಿಲ್ಲ. ನಾನು ಉಡುಪಿ ಎಸ್ಪಿಯಾಗಿಯೇ ಮುಂದುವರಿಯುತ್ತೇನೆಂದು ಹೇಳಿಕೆ ನೀಡಿದ್ದಾರೆ. (ರೈತರ ನಿದ್ದೆಗೆಡಿಸಿದ ಬನಾನ ಸ್ಕಿಪ್ಪರ್ ರೋಗ) ಅಣ್ಣಾಮಲೈ ಜನಪ್ರಿಯತೆ ಎಷ್ಟಿದೆಯೆಂದರೆ, ಒಂದು ವೇಳೆ ಬಾಲಿವುಡ್ ಬಾದಶಾ ಶಾರೂಖ್ ಖಾನ್ ಉಡುಪಿಯ ಕಾಲೇಜಿಗೆ ಭೇಟಿ ನೀಡಿದರೆ ವಿದ್ಯಾರ್ಥಿಗಳು ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತಾರೋ ಇಲ್ಲವೋ ಆದರೆ ಅಣ್ಣಾಮಲೈ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಿರುವುದು ಇಲ್ಲಿನ ವಸ್ತುಸ್ಥಿತಿ. ಪೊಲೀಸ್ ಅಂದರೆ ಹೀಗಿರಬೇಕೆಂದು ತೋರಿಸಿಕೊಟ್ಟು, ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಿ, ಜನಸಮಾನ್ಯರು ತಮ್ಮ ದುಃಖ ದುಮ್ಮಾನ್ನಗಳನ್ನು ಸುಲಭ ರೀತಿಯಲ್ಲಿ ಪರಿಹರಿಸಿಕೊಳ್ಳುವಂತೆ ಮಾಡಿದ ಪೊಲೀಸ್ ಅಧಿಕಾರಿ ಅಣ್ಣಾಮಲೈ ಈ ಮಾಸಾಂತ್ಯದಲ್ಲಿ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಕೆಲವೊಂದು ಮೂಲಗಳ ಪ್ರಕಾರ ಹಾಗೂ ಜಾಲತಾಣಗಳಲ್ಲಿ ಹರಿಯುತ್ತಿರುವ ಸುದ್ದಿಯಂತೆ ಇದೇ ಡಿಸೆಂಬರ್ ಅಂತ್ಯದೊಳಗೆ ಅಣ್ಣಾಮಲೈ ಅವರನ್ನು ಬೇರೆಡೆಗೆ ವರ್ಗಾಯಿಸಿ ಇವರ ಸ್ಥಾನಕ್ಕೆ ಸುಮಾರು ಹದಿನೈದು ವರ್ಷಗಳ ಹಿಂದೆ ಉಡುಪಿ ಡಿವೈಎಸ್ಪಿ ಆಗಿದ್ದ ದಿಲೀಪ್ ಅವರನ್ನು ಕೂರಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. (ಸಂಸದೀಯ ಕಾರ್ಯದರ್ಶಿಯಾಗಿ ಉಡುಪಿ ಶಾಸಕ) ಈಗ ಅಣ್ಣಾಮಲೈ ವರ್ಗಾವಣೆ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿ ಇದೆಲ್ಲಾ ಬೇಸ್ ಲೆಸ್ ಎಂದಿದ್ದಾರೆ. ಆದರೆ ಬೆಂಕಿಯಿಲ್ಲದೇ ಹೊಗೆಯಾಡುತ್ತದೆಯೇ ಎನ್ನುವ ಗುಮಾನಿಗೆ ಉತ್ತರವಿಲ್ಲದಂತಾಗಿದೆ. ಅಣ್ಣಾಮಲೈ ಈ ಭಾಗದಲ್ಲಿ ಯಾಕಿಷ್ಟು ಜನಪ್ರಿಯ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

Read 258 times

Recent Videos

Category: Religious
Views: 64
Category: Religious
Views: 48
Category: Religious
Views: 32