Dars-e-Hadees

 Live Makkah

Live Madinah

Dars-e-Hadees

africa
starway
10 ಸಾವಿರ ಮೊಟ್ಟೆ ಬಳಸಿ ಬೃಹತ್‌ ಆಮ್ಲೆಟ್‌!;ವೈರಲ್‌ ವಿಡಿಯೋ
21 ಸ್ಮಾರ್ಟ್‌ಫೋನ್‌ ಕಂಪನಿ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರದ ನಿಗಾ; ಬಳಕೆದಾರರ ಮಾಹಿತಿ ಸುರಕ್ಷತೆಗೆ ಕ್ರಮ
ದೆಹಲಿಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹೇಗಿತ್ತು
ಬೆಂಗಳೂರಿನಲ್ಲಿ ಮಧ್ಯರಾತ್ರಿ ಮಳೆಯ ಆರ್ಭಟ; 10 ವರ್ಷದಲ್ಲೇ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆ, ಹಲವೆಡೆ ಜನ ಜೀವನ ಅಸ್ತವ್ಯಸ್ತ
ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆಯೆ ವಿದ್ಯಾರ್ಥಿಯ ಹಠಾತ್ ಸಾವು
ಬಸ್ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರಿಬ್ಬರು ಆಸ್ಪತ್ರೆಗೆ.
ಧಾರಾಕಾರ ಮಳೆಗೆ ಬೆಳ್ಳಂದೂರು ಕೆರೆಗೆ ಭಾರೀ ನೊರೆ
ಜಲಾವೃತವಾದ ಶಾಲಾ ಅಂಗಳದಲ್ಲಿ ನಿಂತು ಧ್ವಜಾರೋಹಣ; ಸಾಮಾಜಿಕ ತಾಣಗಳಲ್ಲಿ ಫೋಟೊ ವೈರಲ್
ಇಬ್ಬರು ಮಕ್ಕಳ ನಡುವೆ ಜಗಳ, ಒಬ್ಬ ಬಾಲಕನ ಸಾವು.
38 ಶತಕೋಟಿ ರೂ. ಮೊತ್ತದ ಬಿಲ್ ಕರೆಂಟ್ ಬಿಲ್ ನೋಡಿ ಜಾರ್ಖಂಡ್ ವ್ಯಕ್ತಿಗೆ ‘ಶಾಕ್’..!
Download Free Templates http://bigtheme.net/ Websites Templates

ಹುಲಿ ಜೀವದಾನ ಕೊಡ್ತು.. ಬದುಕು ಬೀದಿಗೆ ಬಿತ್ತು..

ಹುಲಿ ಜೀವದಾನ ಕೊಡ್ತು.. ಬದುಕು ಬೀದಿಗೆ ಬಿತ್ತು..

 

ಜೀವವನ್ನು ಕಿತ್ತು ತಿನ್ನುವ ನೋವು... ಕೀವು ತುಂಬಿದ ಗಾಯಗಳಲ್ಲಿ ತುರಿಕೆ.. ಕೂರಲಿಕ್ಕೂ ಆಗದೆ ನಿಲ್ಲುವುದಕ್ಕೂ ಆಗದೆ ಪರದಾಟ.. ಕಣ್ತುಂಬ ನಿದ್ದೆಯಿಲ್ಲ.. ಜೀವವಿದ್ದರೂ ಸತ್ತಂತೆ ಆಗಿರುವ ಬದುಕು... ಇದು ಹುಲಿ ದಾಳಿಯಿಂದ ಬದುಕಿ ಬಂದಿರುವ ನಂಜನಗೂಡು ತಾಲೂಕಿನ ನಾಗಣಾಪುರ ಕಾಲೋನಿಯ ಆದಿವಾಸಿ ಸಣ್ಣಯ್ಯನ ಸ್ಥಿತಿ. ದುಡಿಯಲೂ ಸಾಧ್ಯವಾಗದೆ, ಗಾಯವೂ ವಾಸಿಯಾಗದೆ ಅಂಗವಿಕಲನಂತಾಗಿರುವ ಸಣ್ಣಯ್ಯನ ಮುಖದಲ್ಲಿ ಬದುಕುವ ಉತ್ಸಾಹವಿಲ್ಲ. ಮೈ ಮೇಲೆ ಎರಗಿದ ಆ ಹುಲಿ ಸಾಯಿಸಿದ್ದರೆ ಈ ನರಕ ಪಡಬೇಕಾಗುತ್ತಿರಲಿಲ್ಲ. ಕುಟುಂಬ ದಿನವೂ ಕಣ್ಣೀರುಗರೆಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾ ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಾನೆ ಸಣ್ಣಯ್ಯ.

ಇತ್ತೀಚೆಗೆ ಇಬ್ಬರನ್ನು ಭಕ್ಷಿಸಿ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಸಾವನ್ನಪ್ಪಿದ ನರಭಕ್ಷಕ ಹುಲಿ ದಾಳಿಗೆ ಸಣ್ಣಯ್ಯ ಸಿಕ್ಕಿ ಹಾಕಿಕೊಂಡಿದ್ದರು. ಸಣ್ಣಯ್ಯ ನವೆಂಬರ್ 12 ರ ಗುರುವಾರದಂದು ಹೆಚ್.ಡಿ.ಕೋಟೆ ತಾಲೂಕಿನ ಅಳಲಹಳ್ಳಿ ಕಾಲೋನಿಯ ತಮ್ಮ ಸಂಬಂಧಿಕರು ಮರಣ ಹೊಂದಿದ ಕಾರಣ ಅಲ್ಲಿಗೆ ತೆರಳಿದ್ದರು. ಈ ಸಂದರ್ಭ ರಸ್ತೆ ಸಮೀಪದ ಪೊದೆಯಲ್ಲಿ ಮೇಕೆಗಳನ್ನು ತಿನ್ನುತ್ತಾ ಕುಳಿತಿದ್ದ ಹುಲಿಯು ಅವರ ಮೇಲೆರಗಿ ಸೊಂಟದ ಕೆಳಭಾಗವನ್ನು ಪರಚಿ ಕಚ್ಚಿ ಗಂಭೀರ ಗಾಯಗೊಳಿಸಿದ್ದಲ್ಲದೆ, ಅವರನ್ನು ತಿನ್ನಲ್ಲು ಹೊತ್ತೊಯ್ಯುತ್ತಿತ್ತು. ಅಷ್ಟರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಹುಲಿಯನ್ನು ಓಡಿಸಿದ್ದಾರೆ. ಬಳಿಕ ಹುಲಿ ಬಾಯಿಗೆ ಸಿಲುಕಿದ ಸಣ್ಣಯ್ಯನನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಸೇರಿಸಿದ್ದರು.

ಜನ ಸಣ್ಣಯ್ಯ ಸತ್ತೇ ಹೋಗುತ್ತಾರೆಂದು ನಂಬಿಕೊಂಡಿದ್ದರು. ಅದೃಷ್ಟವಶಾತ್ ಬದುಕಿ ಉಳಿದಿದ್ದರು. ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮೈಮೇಲಿನ ಗಾಯ ಮಾಗಿದಂತೆ ಕಂಡು ಬಂದ ಕಾರಣ ಇನ್ನು ಮುಂದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ಹೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಆತನನ್ನು ಆಸ್ಪತ್ರೆಯಿಂದ ಮನೆಗೆ ತಂದು ಬಿಟ್ಟು ಹೋದವರು ಮರಳಿ ಬಂದಿಲ್ಲ. ಮೇಲ್ನೋಟಕ್ಕೆ ಗಾಯ ವಾಸಿ ಆದಂತೆ ಕಂಡರೂ ಗಾಯದ ಒಳಗೆ ಕೀವು ತುಂಬಿಕೊಂಡಿದೆ. ಚಿಕಿತ್ಸೆ ಬಳಿಕ ವೈದ್ಯರು ಬರೆದು ಕೊಟ್ಟಿರುವ ಮಾತ್ರೆಗಳನ್ನು ತೆಗೆದುಕೊಳ್ಳಲು ಅವರ ಬಳಿ ಹಣವಿಲ್ಲದಂತಾಗಿದೆ. ರಾತ್ರಿಯ ವೇಳೆಯಲ್ಲಿ ನಿದ್ದೆ ಮಾಡಬೇಕಾದರೆ ನೋವು ಶಮನಕಾರಿ ಮಾತ್ರೆ ನುಂಗಬೇಕು. ಆದರೆ ಅದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಸಾಧ್ಯ ನೋವನ್ನು ಅನುಭವಿಸುತ್ತಾ ದಿನ ಕಳೆಯಬೇಕಾಗಿದೆ. ಇಡೀ ಕುಟುಂಬಕ್ಕೆ ಸಣ್ಣಯ್ಯ ಆಧಾರ ಸ್ಥಂಭವಾಗಿದ್ದರು. ಈಗ ಅವರು ಹಾಸಿಗೆ ಹಿಡಿದಿರುವುದರಿಂದ ಹೆಂಡತಿ ಶಿವಮ್ಮ ಕೂಲಿ ಮಾಡಿ ತರುವ ಹಣದಿಂದಲೇ ಹೊಟ್ಟೆಪಾಡು ನಡೆಯುತ್ತಿದೆ. ಇನ್ನು ಚಿಕಿತ್ಸೆಗೆ ಹಣ ಎಲ್ಲಿಂದ ತರುವುದು? ಇನ್ನಾದರೂ ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಸಣ್ಣಯ್ಯರವರ ಸಹಾಯಕ್ಕೆ ಬರಬೇಕಿದೆ. ಅರಣ್ಯ ಇಲಾಖೆಯಿಂದ ಪರಿಹಾರ ಕೊಡಿಸಬೇಕು ಎಂಬುದು ಮನೆಯವರ ಅಳಲಾಗಿದೆ.

Read 259 times

Recent Videos

Category: Religious
Views: 53
Category: Religious
Views: 41
Category: Religious
Views: 31