Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಡಬಲ್ ಹಂಡ್ರೆಡ್: ದಿಗ್ಗಜರ ಸಾಲಿಗೆ ಸೇರಿದ ರಹಾನೆ

ಡಬಲ್ ಹಂಡ್ರೆಡ್: ದಿಗ್ಗಜರ ಸಾಲಿಗೆ ಸೇರಿದ ರಹಾನೆ

 

ನವದೆಹಲಿ, 06 Dec(Fikrokhabar./sources): ಭಾರತದ ಹೊಸ ಬ್ಯಾಟಿಂಗ್ ಶಕ್ತಿ ಅಜಿಂಕ್ಯ ರಹಾನೆ ದಿಗ್ಗಜರ ಸಾಲಿಗೆ ಸೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ನ ಎರಡೂ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿ ದಾಖಲೆ ಬರೆದಿದ್ದಾರೆ. ಎರಡನೇ ಟೆಸ್ಟ್ ನ ದ್ವಿತೀಯ ಇನಿಂಗ್ಸ್​ನಲ್ಲಿ 206 ಚೆಂಡುಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿದ ರಹಾನೆ 6ನೇ ಶತಕ ದಾಖಲಿದರು. ರಹಾನೆ ಶತಕ ಸಿಡಿಸುತ್ತಿದ್ದಂತೆ ಭಾರತ ದಕ್ಷಿಣ ಆಫ್ರಿಕಾಕ್ಕೆ 481 ರನ್ ಗಳ ಗುರಿ ನೀಡಿ ಡಿಕ್ಲೇರ್ ಮಾಡಿಕೊಂಡಿತು.

ರಹಾನೆ ಮೊದಲ ಇನಿಂಗ್ಸ್ ನಲ್ಲಿ 127 ರನ್​ಗಳ ದಾಖಲಿಸಿದ್ದರು. ಎರಡು ಶತಕ ಬಾರಿಸಿದ ರಹಾನೆ, ವಿಜಯ್ ಹಜಾರೆ, ಸುನೀಲ್ ಗಾವಸ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಸಾಲಿಗೆ ಸೇರಿದ್ದಾರೆ. 27 ವರ್ಷದ ರಹಾನೆ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ತಮ್ಮ ವೃತ್ತಿ ಜೀವನದ 5 ಮತ್ತು 6ನೇ ಶತಕ ದಾಖಲುಮಾಡಿ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಕಾಡಿದರು. ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದ ಭಾರತೀಯರು * ವಿಜಯ್ ಹಜಾರೆ(116 ಮತ್ತು 145) ಆಸ್ಟ್ರೇಲಿಯಾ ವಿರುದ್ಧ , 1948 * ಸುನೀಲ್ ಗಾವಾಸ್ಕರ್(3 ಸಾರಿ) 124, 220 , ವೆಸ್ಟ್ ಇಂಡೀಸ್ ವಿರುದ್ಧ, 1971 111, 137, ಪಾಕಿಸ್ತಾನದ ವಿರುದ್ಧ, 1978 107, 182 (ಅಜೇಯ) ವೆಸ್ಟ್ ಇಂಡೀಸ್ ವಿರುದ್ಧ, 1979 * ರಾಹುಲ್ ದ್ರಾವಿಡ್(2 ಸಾರಿ) 190, 103 (ಅಜೇಯ), ನ್ಯೂಜಿಲೆಂಡ್ ವಿರುದ್ಧ, 1999 110, 135 ಪಾಕಿಸ್ತಾನದ ವಿರುದ್ಧ, 2005 * ವಿರಾಟ್ ಕೊಹ್ಲಿ 115, 141, ಆಸ್ಟ್ರೇಲಿಯಾ ವಿರುದ್ಧ 2015 * ಅಜಿಂಕ್ಯ ರಹಾನೆ, 127, 100 (ಅಜೇಯ), ದಕ್ಷಿಣ ಆಫ್ರಿಕಾ ವಿರುದ್ಧ 2015

Read 93 times

Recent Videos

Category: Religious
Views: 120
Category: Religious
Views: 63
Category: Religious
Views: 33