Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!

ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!

 

ಇದೆಂಥಾ ಕಾಲ ಬಂತಪ್ಪಾ, 09 Jan(Fikrokhabar./soruces) ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕ್ತಾರಾ? ಈ ಸರ್ಕಾರದೋರು.. ಥತ್ತೇರಿಕೆ .. ದಾರಿ ಮೇಲೆ ಹೋಗ್ತಾ ಇದ್ರೆ ಸುಂದರ ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗೆ ಇಲ್ಲದಂಗೆ ಆಯ್ತಲ್ಲಾ.. ಎಂದು ನಾಗರಾಜ ಬೆಳಗ್ಗೆ ಬೆಳಗ್ಗೆನೇ ಕೂಗಾಡ್ತಾ ಇದ್ದ. ಆಯ್ತಪ್ಪಾ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ.. ಒಪ್ಪಿಕೊಂಡೆವು ಅಂಥ ಇಟ್ಕಳ್ಳಿ.. ಹಿಂಬದಿ ಸವಾರರರು ಹೆಲ್ಮೆಟ್ ಹಾಕದೇ ಇದ್ರೆ ಬೈಕ್ ಸವಾರನಿಗೆ ದಂಡ.. ಇದ್ಯಾವ ನ್ಯಾಯ? ಅಲ್ಲಾ ಸ್ವಾಮೀ ಸುಪ್ರೀಂ ಕೋರ್ಟ್ ನೆಪ ಹೇಳೋರು ಇವರು ಏನ್ ಸಾಧನೆ ಮಾಡ್ತಾರೋ...

ಶನಿವಾರ, ಭಾನುವಾರ ಬಂತೂ ಅಂದ್ರೆ ಸುಮ್ಮನೇ ನಂದಿ ಬೆಟ್ಟವೋ, ಶ್ರೀರಂಗಪಟ್ಟಣವೋ ಅಂಥ ತಿರಗಾಡಿಕಂಡು ಇದ್ವಿ. ಇದೀಗ ಇಂಥದ್ದೊಂದು ಎಡವಟ್ಟು ಕಾನೂನು ಮಾಡಿ ಎಂಥಾ ತಾಪತ್ರಯ ತಂದು ಹಾಕ್ಬಿಟ್ರು.. ಅಲ್ಲಾ ಹೊಂಡ ಬಿದ್ದ ರಸ್ತೆ, ಕಿತ್ತೋಗಿರೋ ಫುಟ್ ಪಾತ್, ಬೇಡದೆಡೆ ಹಂಪ್ ಹಾಕಿ ತೊಂದರೆ ಕೊಡುವ ಇವರಿಗೆ ದಂಡ ಹಾಕೋರು ಯಾರು? ಮಕ್ಕಳು-ಮರಿ ಇರೋರು ಕತೆ ಏನು? ಬೆಳಗ್ಗೆ ಸ್ಕೂಲಿಗೆ ಬಿಡಬೇಕಾದ್ರೂ ಹೆಲ್ಮೆಟ್ ಹಾಕೊಂಡು ಹೋಗಬೇಕಾ? ಒಂದು ಬೈಕ್ ನಲ್ಲಿ ಒಂದು ಹೆಲ್ಮೆಟ್ ಇಟ್ಕಳ್ಳಕೇ ಜಾಗ ಇರಲ್ಲ. ಹಾಕಿದ್ದು ಲಾಕ್ ಸಮೇತ ಮೂರು ಹೆಲ್ಮೆಟ್ ಕದ್ದಕಂಡು ಹೋಗಿದಾರೆ. ಇದು ಕಳ್ಳರಿಗೆ ಡಬಲ್ ಧಮಾಕಾ. ಮಗಾ.. ಎಲ್ಲಿದಿಯೋ ಸಿಗ್ನಲ್ ಬಳಿ ನಿಂತಿದ್ದೀನಿ, ಎಂದು ಪ್ರತಿ ಬಾರಿ ಕೀಟಲೇ ಕೊಡ್ತಾ ಇದ್ದೋನನ್ನು ಸಾಗಹಾಕಲು ಒಳ್ಳೆ ಉಪಾಯ ಕೊಟ್ಟ ಸರ್ಕಾರಕ್ಕೆ ಧನ್ಯವಾದ ಹೇಳಲೇಬೇಕು. ಆದ್ರೆ ಅದೇ ಫೊನ್ ನಲ್ಲಿ ಸ್ವೀಟ್ ವಾಯ್ಸ್ ಬಂದ್ರೆ ಮಾತ್ರ ಎದೆ ಒಡೆದು ಚೂರಾದಂತೆ! ಪ್ರೀತಿ ಬ್ರೇಕ್ ಅಪ್ ಆಗಲು ಹೊಸ ಕಾರಣವೊಂದು ಸಿಕ್ಕಿದ ಹಾಗಯ್ತು! ಹಿಂಬದಿ ಸವಾರಿಗೆ ಹೆಲ್ಮೆಟ್ ಕಡ್ಡಾಯವನ್ನು ಹೀಗೂ ಅನ್ಕಬಹುದು! * ನಿಮಗೊಂದು, ನಿಮ್ಮ ಹಿಂದೆ ಕುಳಿತವರಿಗೊಂದು * ಬೈಕ್ ಒಂದು, ಹೆಲ್ಮೆಟ್ ಎರಡು(ಮೂರು ಅಂಥಾನೂ ಸೆರಿಸ್ಕೋಬಹುದು)| * ಸರ್ಕಾರಕ್ಕೆ ಆಟ, ಜನರಿಗೆ ಪ್ರಾಣ ಸಂಕಟ * ಹಿಂಬದಿ ಸವಾರ ಹೆಲ್ಮೆಟ್ ಹಾಕದಿದ್ರೆ, ಮುಂಬದಿ ಸವಾರನಿಗೆ ಬರೆ * ಮನೆಗೆರಡು ಬೈಕ್, ಬೈಕ್ ಗೆ ಎರಡು ಹೆಲ್ಮೆಟ್ * ಏನೇ ಬರಲಿ.. ಏರಡು ಹೆಲ್ಮೆಟ್ ಇರಲಿ..

Read 254 times

Recent Videos

Category: Religious
Views: 145
Category: Religious
Views: 77
Category: Religious
Views: 42