Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನೇತಾಜಿ ಬದುಕಿರಲಿಲ್ಲ: ವೆಬ್ ಸೈಟ್

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನೇತಾಜಿ ಬದುಕಿರಲಿಲ್ಲ: ವೆಬ್ ಸೈಟ್

 

ಲಂಡನ್, 17 Jan(Fikrokhabar./sources): ಭಾರತದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು, ನಿಗೂಢ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿ ಬಂದಿದೆ. ವಿಮಾನ ಅಪಘಾತದ ಪ್ರತ್ಯಕ್ಷ ದರ್ಶಿಗಳ ಸಾಕ್ಷಿ ಆಧಾರಿಸಿ ಬ್ರಿಟಿಷ್ ವೆಬ್ ಸೈಟ್ ಪ್ರಕಟಿಸಿರುವ ಪ್ರಕಾರ, ನೇತಾಜಿ ಅವರು ವಿಮಾನ ಅಪಘಾತದ ಪರಿಣಾಮವಾಗಿ ಸಾವನ್ನಪ್ಪಿದ್ದು ನಿಜ ಎಂದು ಖಚಿತಪಡಿಸಲಾಗಿದೆ. ತೈವಾನ್​ನಲ್ಲಿ ಸಂಭವಿಸಿದ ವಿಮಾನ ದುರಂತ (ಆಗಸ್ಟ್ 18, 1945)ದ ಬಳಿಕವೂ ಕೆಲ ದಿನ ನೇತಾಜಿ ಬದುಕಿದ್ದರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಬ್ರಿಟನ್ ವೆಬ್​ಸೈಟ್ ಪ್ರಕಟಣೆ ಹೊರಡಿಸಿ ಭಾರಿ ಚರ್ಚೆಗೆ ನಾಂದಿ ಹಾಡಿತ್ತು. ವಿಮಾನ ದುರಂತದ ಬಳಿಕ ನೇತಾಜಿ ಬದುಕಿದ್ದರಾದರೂ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ನೇತಾಜಿ ಅವರ ನಿಕಟವರ್ತಿಗಳು, ಇಬ್ಬರು ಜಪಾನ್ ವೈದ್ಯರು, ಒಬ್ಬ ಅನುವಾದಕ, ಒಬ್ಬ ತೈವಾನಿನ ನರ್ಸ್ ಅವರ ಹೇಳಿಕೆ ಆಧಾರಿಸಿ ವರದಿ ತಯಾರಿಸಲಾಗಿದೆ. www. bosefiles.info ವರದಿ ಪ್ರಕಾರ ಆಗಸ್ಟ್ 18, 1945 ರ ರಾತ್ರಿಯೇ ನೇತಾಜಿ ಅಸುನೀಗಿದ್ದಾರೆ. ಹೀಗಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನೇತಾಜಿ ಬದುಕಿದ್ದರು ಎಂಬ ವಾದದಲ್ಲಿ ಹುರುಳಿಲ್ಲ ಎಂದು ವೆಬ್ ಸೈಟ್ ಹೇಳಿದೆ. ಈ ಬಗ್ಗೆ ಸ್ಪಷ್ಟನೆ ಪತ್ರವನ್ನು ಕರ್ನಲ್ ಹಬೀಬ್ ಉರ್ ರೆಹಮಾನ್ ಅವರು ಕೂಡಾ ನೀಡಿದ್ದಾರೆ. ವೆಬ್ ಸೈಟ್ ಕಡತಗಳ ಪ್ರಕಾರ ಸುಭಾಷ್​ಚಂದ್ರ ಬೋಸ್ ಜತೆ ಅವರ ಬೆಂಬಲಿಗರು ಮತ್ತು ವಿಮಾನ ಸಿಬ್ಬಂದಿ ಸೇರಿ 12ರಿಂದ 13 ಜನರಿದ್ದರು. 18 ಆಗಸ್ಟ್ 1945ರಲ್ಲಿ ಜಪಾನ್ ಸೇನಾ ಮುಖ್ಯಸ್ಥ ಲೆ.ಜ. ಸುನಮಸಾ ಶಿಡೈ ಕೂಡ ವಿಮಾನದಲ್ಲಿದ್ದರು. ಹಿಟೊ-ತೈಪೆ-ಡೇರನ್ ಮಾರ್ಗದ ಮೂಲಕ ಜಪಾನ್ ರಾಜಧಾನಿ ಟೊಕಿಯೊ ತಲುಪುವ ಕಾರ್ಯಕ್ರಮ ನಿಗದಿಯಾಗಿತ್ತು. ವಿಮಾನ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ದೊಡ್ಡ ಸ್ಫೋಟದೊಂದಿಗೆ ವಿಮಾನದ ಪ್ರೊಪೆಲರ್ ಕಳಚಿತು. ರನ್ ವೇ ನಿಂದ 100 ಮೀಟರ್ ದೂರದಲ್ಲಿ ವಿಮಾನ ಬೆಂಕಿಗೆ ಆಹುತಿಯಾಯಿತು. ವಿಮಾನದ ಮುಂಭಾಗದಿಂದ ನೇತಾಜಿ ಹಾರಿ ಜೀವ ಉಳಿಸಿಕೊಂಡರು. ಆದರೆ, ಬೆಂಕಿಗೆ ಅವರ ದೇಹದ್ ಭಾಗ ಸುಟ್ಟು ಹೋಗಿತ್ತು ಎಂದು ಬೋಸ್ ಜತೆ ಪ್ರಯಾಣಿಸುತ್ತಿದ್ದ ಕರ್ನಲ್ ಹಬೀಬ್ ಉರ್ ರೆಹಮಾನ್ ಹೇಳಿದ್ದಾರೆ.

Read 225 times

Recent Videos

Category: Religious
Views: 145
Category: Religious
Views: 77
Category: Religious
Views: 42