Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಭಾರತದಿಂದ ಅಫ್ಘನ್‌ಗೆ ಸಂಸತ್ ಕಟ್ಟಡ ಕೊಡುಗೆ

ಭಾರತದಿಂದ ಅಫ್ಘನ್‌ಗೆ ಸಂಸತ್ ಕಟ್ಟಡ ಕೊಡುಗೆ

 

ಕಾಬೂಲ್‌ (ಪಿಟಿಐ): 26 Dec(Fikrokhabar./sources) ಭಾರತ ಅಫ್ಘಾನಿಸ್ತಾನದಲ್ಲಿ ನಿರ್ಮಿಸಿರುವ 710 ಕೋಟಿ ವೆಚ್ಚದ ನೂತನ ಸಂಸತ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ, ಅಫ್ಘನ್‌ ಅಧ್ಯಕ್ಷ ಅಶ್ರಫ್ ಘನಿ ಸಮ್ಮುಖದಲ್ಲಿ ಶುಕ್ರವಾರ ಉದ್ಘಾಟಿಸಿದರು. ಪ್ರಜಾಪ್ರಭುತ್ವವಾದಿ ದೇಶವಾಗಿ ಆಫ್ಘಾನಿಸ್ತಾನದ ಪ್ರಗತಿಗೆ ಸಂಸತ್ ಕಟ್ಟಡವು ಸಣ್ಣ ಕಾಣಿಕೆ. ಇದು ಸ್ನೇಹ ಹಾಗೂ ಮಹತ್ವಾಕಾಂಕ್ಷೆಯ ಬಾಂಧವ್ಯದ ಸಂಕೇತ ಎಂದು ಮೋದಿ ಹೇಳಿದರು.
ಸಂಸತ್‌ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ನಿರ್ಮಿಸಿರುವ ‘ಅಟಲ್‌ ಬ್ಲಾಕ್‌’ಅನ್ನು ಸಹ ಈ ವೇಳೆ ಪ್ರಧಾನಿ ಉದ್ಘಾಟಿಸಿದರು.


ಭಯೋತ್ಪಾದನಾ ಪೋಷಣಾ ಮತ್ತು ಆಶ್ರಯ ಕೇಂದ್ರಗಳು ಸ್ಥಗಿತವಾಗಿ ಗಡಿಯುದ್ದಕ್ಕೂ ಭಯೋತ್ಪಾದನೆ ಸಂಪೂರ್ಣ ಅಂತ್ಯಗೊಂಡ ಬಳಿಕವೇ ಆಫ್ಘಾನಿಸ್ತಾನವು ಯಶಸ್ಸು ಗಳಿಸಲು ಸಾಧ್ಯ ಎಂದ ಮೋದಿ, ನಮ್ಮ ಸಹಭಾಗಿತ್ವ ಬಲ ಕೆಲವರಲ್ಲಿ ತಳಮಳ ಹುಟ್ಟಿಸಿದೆ. ಇನ್ನು ಕೆಲವರು ನಮ್ಮನ್ನು ಧೃತಿಗೆಡಿಸಲು ಸಹ ಪ್ರಯತ್ನಿಸಿದ್ದರು. ಆದರೆ ನೀವು ನಮ್ಮ ಪ್ರಾಮಾಣಿಕತೆಯನ್ನು ಮತ್ತು ಸ್ನೇಹದ ಬಲವನ್ನು ಅನುಮಾನಿಸಲಿಲ್ಲ. ನಿಮ್ಮ ಕಣ್ಣಿಗೆ ಕಂಡಂತೆ ನಮ್ಮನ್ನು ತೀರ್ಮಾನಿಸಿ, ಇತರರು ನಿಮಗೆ ಹೇಳಿದಂತೆ ಅಲ್ಲ ಎಂದರು.

ಭಾರತವು ಆಫ್ಘಾನಿಸ್ತಾನದಲ್ಲಿ ಇರುವುದು ನೆರವು ನೀಡುವ ಸಲುವಾಗಿಯೇ ಹೊರತು ಸ್ಪರ್ಧಿಸಲು ಅಲ್ಲ; ಭವಿಷ್ಯದ ತಳಪಾಯ ಹಾಕುವುದಕ್ಕಾಗಿಯೇ ಹೊರತು ಸಂಘರ್ಷದ ಕಿಡಿ ಹೊತ್ತಿಸಲು ಅಲ್ಲ ಎಂದ ಮೋದಿ ಭಯೋತ್ಪಾದನೆ ಮತ್ತು ಹಿಂಸೆ ಆಫ್ಘಾನಿಸ್ತಾನದ ಭವಿಷ್ಯವನ್ನು ರೂಪಿಸುವ ಅಥವಾ ಆಫ್ಘನ್ನರ ಆಯ್ಕೆಗಳನ್ನು ನಿರ್ಧರಿಸುವ ಸಾಧನವಾಗಲಾರವು ಎಂದರು.

Read 238 times

Recent Videos

Category: Religious
Views: 53
Category: Religious
Views: 41
Category: Religious
Views: 31