Dars-e-Hadees

 Live Makkah

Live Madinah

Dars-e-Hadees

africa
starway
ಲಾರಿ ಮತ್ತು ಪಿಕಪ್ ನಡುವೆ ಮುಖಾ ಮುಖಿ ಡಿಕ್ಕಿ, ಚಾಲಕನ ಸ್ಥಿತಿ ಗಂಭೀರ
15 ವರ್ಷದ ಪುತ್ರಿ ಮೇಲೆ ಪೊಲೀಸ್‌ ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ: ಆಘಾತಕ್ಕೆ ತಂದೆ ಸಾವು
ಬೈಕ್ ಸ್ಕಿಡ್ ಆಗಿ ಬಿದ್ದು ಸಿಐಡಿ ಹೆಡ್‍ಕಾನ್‍ಸ್ಟೆಬಲ್ ಸಾವು
ಹಳಿ ನಿರ್ವಹಣೆ ವೈಫಲ್ಯವೇ ಉತ್ಕಾಲ್ ಎಕ್ಸ್ ಪ್ರೆಸ್ ದುರಂತಕ್ಕೆ ಕಾರಣ
ಗೈಲ್ ಗ್ಯಾಸ್‌ ಕಂಪೆನಿಗೆ ಪ್ರತಿ ದಿನ ₹1 ಲಕ್ಷ ನಷ್ಟ
ಕೊಲೆ ಯತ್ನ ಪ್ರಕರಣದ ಸಾಕ್ಷಿಗಳ ಮೇಲೆ ಮಾರಣಾಂತಿಕ ಹಲ್ಲೆ.
ಹುಡುಗಿಯ ಜಡೆಗೆ ಕತ್ತರಿ ಹಾಕಿದ್ದಾರೆ ಎಂದು ಶಂಕಿಸಿ ಮಹಿಳೆಯನ್ನು ಕಲ್ಲು ಹೊಡೆದು ಸಾಯಿಸಿದರು!
ಹಳಿ ತಪ್ಪಿದ ಉತ್ಕಲ್‌ ಎಕ್ಸ್‌ಪ್ರೆಸ್‌: ಆರು ಬೋಗಿ ಉರುಳಿ ಐದು ಜನ ಸಾವು?
Download Free Templates http://bigtheme.net/ Websites Templates

ವಿಶ್ವದ ಅತೀ ತೂಕದ ವ್ಯಕ್ತಿ ಆಂಡ್ರೆಸ್ ಮೊರೆನೊ ಇನ್ನಿಲ್ಲ

ವಿಶ್ವದ ಅತೀ ತೂಕದ ವ್ಯಕ್ತಿ ಆಂಡ್ರೆಸ್ ಮೊರೆನೊ ಇನ್ನಿಲ್ಲ

 

ಮೆಕ್ಸಿಕೋ, 26 Dec(Fikrokhabar./sources): ವಿಶ್ವದ ಅತಿ ತೂಕದ ವ್ಯಕಿ ಆಂಡ್ರೆಸ್ ಮೊರೆನೊ ಎಂಬಾತ ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬದಂದು ಮೆಕ್ಸಿಕೋದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗಮಧ್ಯೆದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಎರಡು ತಿಂಗಳ ಹಿಂದೆ ತೂಕ ಇಳಿಸಿಕೊಳ್ಳುವ ಚಿಕಿತ್ಸೆಗೆ ಒಳಗಾದ ಆಂಡ್ರೆಸ್ ಮೊರೆನೊ ಜಠರದ ಉರಿಯೂತ ಸಮಸ್ಯೆಯಿಂದ ನರಳುತ್ತಿದ್ದರು. ಕ್ರಿಸ್ಮಸ್ ಹಿಂದಿನ ದಿನವೇ ಅಸ್ವಸ್ಥರಾದ ಇವರು ಹಬ್ಬದಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಆಂಡ್ರೆಸ್ ಮೊರೆನೊ ಅವರು ಬರೋಬ್ಬರಿ 450 ಕೆಜಿ ತೂಕವಿದ್ದು, ಅಕ್ಟೋಬರ್ ತಿಂಗಳಲ್ಲಿ ದೇಹದ ತೂಕ ಕಡಿಮೆ ಮಾಡುವ ಬ್ಯಾರಿಯಾಟ್ರಿಕ್ ಚಿಕಿತ್ಸೆಗೆ ಒಳಗಾಗಿ 100ಕೆಜಿ ತೂಕ ಇಳಿಸಿಕೊಂಡು, 350 ಕೆಜಿಗೆ ಬಂದಿದ್ದರು. ಜಠರ ಉರಿಯೂತ ಸಮಸ್ಯೆಯ ಬಳಲಿಕೆಯಿಂದ ಉಪಶಮನ ಪಡೆಯಲು ನವೆಂಬರ್ 19ರಂದು ಸಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯದಲ್ಲಿ ಕೊಂಚ ಚೇತರಿಕೆಯೂ ಕಂಡಿತ್ತು. ಕೆಲದಿನಗಳ ಕಾಲ ಆರಾಮವಾಗಿದ್ದ ಮೊರೆನೊ ಅವರಿಗೆ ಕ್ರಿಸ್ಮಸ್ ಹಬ್ಬದ ದಿನದಂದು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಕುಟುಂಬದ ಸದಸ್ಯರು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಸಂಸ್ಕಾರ ಮೆಕ್ಸಿಕೋದ ಸೊನೊರಾ ಎಂಬಲ್ಲಿ ನಡೆಯಲಿದೆ.

Read 74 times

Recent Videos

Category: Religious
Views: 54
Category: Religious
Views: 42
Category: Religious
Views: 31