Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಏನಿದು ಮಾಘಮೇಳ? ಏನಿದರ ವೈಶಿಷ್ಟ್ಯ?

ಏನಿದು ಮಾಘಮೇಳ? ಏನಿದರ ವೈಶಿಷ್ಟ್ಯ?

 

ಬೆಂಗಳೂರು, 01 Feb(Fikrokhabar./sources): ಮಾಘಮೇಳ ಇದು ಹಿಂದೂಗಳ ಬಹುಮುಖ್ಯವಾದ ಧಾರ್ಮಿಕ ಹಬ್ಬ. ಇದನ್ನು ಗಂಗಾ, ಯಮುನಾ, ಸರಸ್ವತಿ ಈ ಮೂರು ನದಿಗಳ ಸಂಗಮದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪಾಲ್ಗೊಂಡ ಭಕ್ತಾಧಿಗಳು ಗಂಗಾ ಸಂಗಮದಲ್ಲಿ ಮಿಂದು ಪುನೀತರಾಗುತ್ತಾರೆ. ಮಾಘ ಮೇಳ ಸಾಮಾನ್ಯವಾಗಿ ಜನವರಿ 14ರಿಂದ ಪ್ರಾರಂಭವಾಗಿ ಮಾರ್ಚ್ 7ಕ್ಕೆ ಮುಕ್ತಾಯವಾಗುತ್ತದೆ.

ಮಾಘಮೇಳವನ್ನು ಸಣ್ಣದಾದ ಕುಂಭ ಮೇಳ ಎಂದು ಕರೆಯಲಾಗುತ್ತದೆ. ಉತ್ತರ ಭಾರತದ ಕ್ಯಾಲೆಂಡರ್ ಪ್ರಕಾರ ಈ ಹಬ್ಬವನ್ನು ಮಾಘಮಾಸದಲ್ಲಿ ಕೈಗೊಳ್ಳಲಾಗುತ್ತದೆ. ಗಂಗಾನದಿ ಸಂಗಮದಲ್ಲಿ ಮಿಂದೆದ್ದರೆ ನಮ್ಮ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ. ಮೋಕ್ಷ ಸಿಗುತ್ತದೆ ಎಂಬ ಉದ್ದೇಶದಿಂದ ಪ್ರತಿಯೊಬ್ಬರು ಈ ಮಾಘಮೇಳದಲ್ಲಿ ಪಾಲ್ಗೊಂಡು ಮಿಂದೇಳುತ್ತಾರೆ. ಇದು ಸರಾಸರಿ ಒಂದುವರೆ ತಿಂಗಳು ಅಂದರೆ 45 ದಿನಗಳ ಕಾಲ ವಿವಿಧ ಭಾಗಗಳಲ್ಲಿ ಜನರು ಆಚರಿಸುತ್ತಾರೆ. ಈ ವರ್ಷದಲ್ಲಿ ಮಾಘಮೇಳವು ಜನವರಿ 14ರಿಂದ ಆರಂಭಗೊಂಡಿದ್ದು, ಫೆಬ್ರವರಿ 08 (ಪೌಷ್ ಪೂರ್ಣಿಮಾ), ಫೆಬ್ರವರಿ 12 (ಬಸಂತ್ ಅಮವಾಸ್ಯೆ), ಫೆಬ್ರವರಿ 22 ( ಮಾಘಿ ಪೂರ್ಣಿಮಾ), ಮಾರ್ಚ್ 7(ಮಹಾಶಿವರಾತ್ರಿ) ನಡೆಯುತ್ತದೆ. ಹೀಗೆ ಈ ಸುದ್ದಿಯ ಜೊತೆ ಇನ್ನಷ್ಟು ಮಾಹಿತಿಯ ಜೊತೆಗೆ ಇನ್ನಿತರ ಸುದ್ದಿಗಳು ಇಲ್ಲಿವೆ.

Read 40 times

Recent Videos

Category: Religious
Views: 122
Category: Religious
Views: 63
Category: Religious
Views: 33