Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಬೆಂಗಳೂರು: ಗೋಪಾಲನ್ ಆರ್ಕೆಡ್‌ನಲ್ಲಿ ಅಗ್ನಿ ಅವಘಡ

ಬೆಂಗಳೂರು: ಗೋಪಾಲನ್ ಆರ್ಕೆಡ್‌ನಲ್ಲಿ ಅಗ್ನಿ ಅವಘಡ

 

ಬೆಂಗಳೂರು, 01 Feb(Fikrokhabar./sources): ಬೆಂಗಳೂರಿನ ರಾಜರಾಜೇಶ್ವರಿ ನಗರದ ಗೇಟ್ ಸಮೀಪದ ಗೋಪಾಲನ್ ಮಾಲ್ ನಲ್ಲಿ ಸೋಮವಾರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಬ್ರ್ಯಾಂಡ್ ಫ್ಯಾಕ್ಟರಿ ಶೋ ರೂಂ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮಾಲ್ ನ ಮೊದಲನೇ ಮ್ಯಾಕ್ ಡೋನಾಲ್ಡ್ ಕಿಚನ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು ನಂತರ ವಿವಿಧೆಡೆಗೆ ಹಬ್ಬಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬೆಳಗ್ಗೆ 10 ಗಂಟೆ ವೇಳೆಗೆ ಹೊಗೆ ಕಾಣಿಸಿಕೊಂಡಿದ್ದು ಆರಂಭದಲ್ಲಿ ಮಾಲ್ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಬ್ರ್ಯಾಂಡ್ ಫ್ಯಾಟರಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ನಂತರ ಇತರ ಕಡೆ ಹಬ್ಬಿದೆ. ಸಿಬ್ಬಂದಿಯಿಂದ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಮಾಲ್ ನಲ್ಲಿ ಹೆಚ್ಚಿನ ಜನ ಇರಲಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿ ಮಾಲ್ ಬಿಟ್ಟು ಹೊರಕ್ಕೆ ಬಂದಿದ್ದಾರೆ. ಬ್ರ್ಯಾಂಡ್ ಫ್ಯಾಕ್ಟರಿಯಲ್ಲಿದ್ದ ಎಲ್ಲ ಬಟ್ಟೆಗಳು ಅಗ್ನಿಗೆ ಆಹುತಿಯಾಗಿದೆ.

ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕೆ ಆರ್ ಮಾರುಕಟ್ಟೆ ಸಮೀಪದ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿದ್ದು ಸಿಬ್ಬಂದಿಯೊಂದಿಗೆ ಸೇರಿ ಬೆಂಕಿ ಆರಿಸಲು ಯತ್ನ ಮಾಡುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಹೇಳಲಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಬೆಂಗಳೂರಿನ ಎಲ್ಲ ಮಾಲ್ ಗಳಿಗೂ ಅಗ್ನಿ ಸುರಕ್ಷತೆ ಸಂಬಂಧ ಈ ಮೊದಲೇ ತಿಳಿವಳಿಕೆ ನೀಡಲಾಗಿದೆ. ಅವುಗಳ ಪಾಲನೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ ದೊರೆತಂತಾಗಿದೆ.

Read 38 times

Recent Videos

Category: Religious
Views: 121
Category: Religious
Views: 63
Category: Religious
Views: 33