Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

‘ಹಿಂದೂ ದೇವರ ನಾಲ್ಕೂ ಕರಗಳಲ್ಲಿ ಆಯುಧಗಳಿವೆ’

ಮಂಗಳೂರು: 18 ಜನುವರಿ (ಫಿಕ್ರೋಖಬರ್ ಸುದ್ದಿ) ಗುರುಪುರಶ್ರೀ ಭೇಟಿಯಾದ ಸಂಸದ ಹೆಗಡೆ:‘ನಮ್ಮ ಹಿಂದೂ ದೇವರ ನಾಲ್ಕೂ

ಕರಗಳಲ್ಲಿ ಆಯುಧಗಳಿವೆ. ಇದಕ್ಕಿಂತ ಜಾಸ್ತಿ ಇನ್ನೇನೂ ಹೇಳಬೇಕಿಲ್ಲ. ಧರ್ಮರಕ್ಷಣೆಯ ಕಾರ್ಯ ಬಂದಾಗ ಪ್ರತಿಯೊಬ್ಬ ಹಿಂದುವೂ ಒಗ್ಗಟ್ಟಾಗಬೇಕು’ ಎಂದು ಉತ್ತರ ಕನ್ನಡ ಸಂಸದ, ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶಿಲತಾ ಸಚಿವ ಅನಂತ್‌ಕುಮಾರ್ ಹೆಗಡೆ ಮಾರ್ಮಿಕವಾಗಿ ನುಡಿದರು. ಇಂದು ಬೆಳಗ್ಗೆ ಗುರುಪುರ ವಜ್ರದೇಹಿ ಮಠಕ್ಕೆ ಭೇಟಿ ನೀಡಿದ ಹೆಗಡೆಯವರು ರಾಜಶೇಖರಾನಂದ ಶ್ರೀಗಳ ಜೊತೆ ಚರ್ಚಿಸಿದರು. ಬಳಿಕ ಮಠದ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗುರುಪುರ ಶ್ರೀಯವರಿಂದ ಅಭಿನಂದನೆಯನ್ನು ಸ್ವೀಕರಿಸಿದರು. ಹೆಗಡೆಯವರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಗುರುಪುರ ಶ್ರೀಗಳು, ‘ಹೆಗಡೆಯವರ ಭೇಟಿ ರಾಜಕೀಯವಾಗಿ ನಡೆದಿಲ್ಲ. ಮಠದ ಜಾತ್ರೆಯಲ್ಲಿ ಹೆಗಡೆಯವರು ಪಾಲ್ಗೊಳ್ಳಬೇಕಿತ್ತು. ಆದರೆ ಅನಾನುಕೂಲತೆಯಿಂದಾಗಿ ಅವರು ಪಾಲ್ಗೊಂಡಿರಲಿಲ್ಲ. ಹೀಗಾಗಿ ಇಂದು ಭೇಟಿ ನೀಡಿದ್ದಾರೆ’ ಎಂದರು. ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಉಪಸ್ಥಿತರಿದ್ದರು. ಹೆಗಡೆಯವರು ಮಧ್ಯಾಹ್ನದ ಬಳಿಕ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳ ನಿವಾಸಿ ದೀಪಕ್ ರಾವ್ ಮನೆಗೆ ಭೇಟಿ ನೀಡಲಿದ್ದಾರೆ.
ಸ್ವಾಮೀಜಿಗೆ ಸಮನ್ಸ್!
ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಗುರುಪುರ ಶ್ರೀಗಳಿಗೆ ವಾಮಂಜೂರು ಠಾಣಾ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಕೇಸ್‌ಗಳನ್ನು ಮತ್ತೆ ಹೆಕ್ಕಿ ತೆಗೆದು ಹಿಂದೂ ಸ್ವಾಮೀಜಿಗಳು, ನಾಯಕರನ್ನು ಹಣಿಯುವ ವ್ಯವಸ್ಥಿತ ತಂತ್ರ ಇದಾಗಿದೆ. ನೋಟಿಸ್‌ನಲ್ಲಿ ಯಾವ ಪ್ರಕರಣವೆಂದೂ ಜಾರಿಯಾಗಿಲ್ಲ. ನನ್ನ ವಿರುದ್ಧ ಗೂಂಡಾ ಕಾಯ್ದೆ ಹಾಕಲು ಪಿತೂರಿ ನಡೆದಿರಬಹುದು’ ಎಂದರು. ಹಿಂದೂ ಟಾಸ್ಕ್ ಪೋಸ್ ಮತಾಂತರ, ಲವ್ ಜಿಹಾದ್ ವಿರುದ್ಧ ಕಾರ್ಯಾಚರಣೆ ನಡೆಸಲಿದೆ. ಇದನ್ನು ತಡೆಯಲು ಯಾರಿಂದಲೂ ಆಗದು. ಹಿಂದೂ ಸ್ವಾಮೀಜಿಗಳು, ಮುಖಂಡರ ಮೇಲೆ ಸುಳ್ಳು ಕೇಸ್ ಜಡಿಯುವ ಮುಖ್ಯಮಂತ್ರಿಗಳಿಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದು ಶ್ರೀಗಳು ಹೇಳಿದರು.

ಸಂ, ವಾ ವರದಿ

Read 6 times

Recent Videos

Category: Religious
Views: 145
Category: Religious
Views: 77
Category: Religious
Views: 42