Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ

ಹೊನ್ನಾವರ:14 ಡಿಸೆಂಬರ್(ಫಿಕ್ರೋಖಬರ್ ಸುದ್ದಿ)ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ತೀವ್ರ ಹಿಂಸಾಚಾರಕ್ಕೆ ತಿರುಗಿ

ಇದೀಗ ಪರಿಸ್ಥಿತಿ ನಿಯಂತ್ರಣಗೊಳ್ಳುತ್ತಿರುವ ಹೊತ್ತಿನಲ್ಲೇ ಶಾಲೆಗೆಂದು ತೆರಳುತ್ತಿದ್ದ ವಿದ್ಯಾರ್ಥಿನಿಗೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿರುವ ಕಳವಳಕಾರಿ ವರದಿಯೊಂದು ಹೊನ್ನಾವರದಿಂದ ವರದಿಯಾಗಿದೆ.

ಹೊನ್ನಾವರ ತಾಲೂಕಿನ ಮಾಗೋಡದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮುಸುಕು ಹಾಕಿಕೊಂಡು ಬಂದು ಹೈಸ್ಕೂಲ್‌ಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಾವ್ಯಾಳಿಗೆ ಇರಿದು ಪರಾರಿಯಾಗಿದ್ದಾರೆ.

ಕಾವ್ಯಾಳ 2 ಕೈಗಳಿಗೆ ಚೂರಿ ಇರಿತದ ಗಾಯಗಳಾಗಿದ್ದು, ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಕೃತ್ಯ ನಡೆಸಿದವರು ಅನ್ಯ ಕೋಮಿನವರು ಎಂಬ ವದಂತಿಗಳು ಹಬ್ಬಿ ಶಾಂತಿ ಕದಡುವ ಅಪಾಯ ಹೆಚ್ಚಿದೆ.

ಮುಂಜಾಗೃತಾ ಕ್ರಮವಾಗಿ ಹೊನ್ನಾವರದಲ್ಲಿ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿರುವ ಬಗ್ಗೆ ವರದಿಯಾಗಿದೆ.

ಸತತ ಎರಡು ದಿನಗಳ ಕಾಲ ಕೋಮು ದಳ್ಳುರಿಯಿಂದ ನಲುಗಿ ಬುಧವಾರದಿಂದಷ್ಟೆ ಚೇತರಿಸಿಕೊಳ್ಳುತ್ತಿದ್ದ ಜಿಲ್ಲೆಯಲ್ಲಿ ಮತ್ತೆ ಆತಂಕದ ಛಾಯೆ ಉಂಟಾಗಿದೆ.

ಕ, ಕ ವರದಿ 

Read 11 times

Recent Videos

Category: Religious
Views: 138
Category: Religious
Views: 75
Category: Religious
Views: 38