Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಪರೇಶ್ ಸಾವಿಗೆ ರಾಜಕೀಯ ರಂಗಿನಿಂದ ಸಮಾಜದ ವಿಭಜನೆ

ಹೊನ್ನಾವರ: 13 ಡಿಸೆಂಬರ್ (ಫಿಕ್ರೋಖಬರ್ ಸುದ್ದಿ) ಪರೇಶ್ ಮೇಸ್ತನ ಸಾವಿನ ಪ್ರಕರಣ ದಿನೇ ದಿನೇ ಹೊಸ ರಂಗು ಮೂಡುತ್ತಿದೆ.

ಇದರಲ್ಲಿ ರಾಜಕೀಯ ಕೈವಾಡವಿದೆ ಎಂದು ತಿಳಿದು ಬಂದಿದೆ. ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಸಿದ್ದು, ಆ ಸುದ್ದಿಗಳೆಲ್ಲಾ ಸುಳ್ಳು ಎಂದು ಪಶ್ಚಿಮ ವಲಯದ ಐ,ಜಿ,ಪಿ ಹೇಮಂತ್ ನಿಂಬಾಳ್ಕರ್ ಅವರು ಹೇಳಿದ್ದಾರೆ. ತಮ್ಮ ಸ್ವಾಥ್ರ್ಯಕ್ಕಾಗಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿ ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸಿ, ಜನರಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ, ಸಮಾಜವನ್ನು ವಿಭಜಿಸುವ ಷಡ್ಯಂತ್ರ ರಚಿಸುತ್ತಿದ್ದಾರೆ. ಡಿಸೆಂಬರ್ 12 ರಂದು ದೊರಕಿದ ಮರಣೋತ್ತರ ಪರೀಕ್ಷೆಯ ವರದಿಯಿಂದ ಸಮಾಜಿಕ ಜಾಲತಾಣಗಳಲ್ಲಿ ಮತ್ತು ಪತ್ರಿಕಾ ಪ್ರಕಟಣೆಗಳ ಸುದ್ದಿಗಳು ಸುಳ್ಳು ಎಂಬುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೊನ್ನಾವರದ ಪೋಲೀಸರು ಎಫ್,ಎಸ್,ಎಲ್ ತಜ್ಞರಿಗೆ ಪರೇಶನ ಮರಣೋತ್ತರ ಪರೀಕ್ಷೆ ವರದಿಯ ಬಗ್ಗೆ ಕುರಿತು ಒಟ್ಟು 19 ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ಉತ್ತರ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ತಜ್ಞ ಡಾ| ಶಂಕರ್ ಎಂ ಬಕ್ಕಣ್ಣವರ್ ಅವರು ನೀಡಿದ್ದಾರೆ.

ಪ್ರಶ್ನೆ 1: ಸಾವಿಗೀಡಾದ ವ್ಯಕ್ತಿಯ ದೇಹದ ಮೇಲೆ ಆಯುಧಗಳಿಂದ ಮಾಡಿದ ಹಲ್ಲೆಯ ಗುರುತುಗಳೇನಾದರೂ ಇದ್ದವೇ? ಇದ್ದರೆ ಆ ಆಯುಧಗಳು ಯಾವ ರೀತಿಯದ್ದು? ಹರಿತವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆಯೇ?
ಉತ್ತರ: ಪರೇಶ್ ಮೆಸ್ತಾ ಅವರ ಮೇಲೆ ಹಲ್ಲೆಗಳಾಗಿಲ್ಲ, ದೇಹದಲ್ಲಿ ಎರಡು ಕಡೆ ಉಜ್ಜುಗಾಯವಾದ ಕುರುಹು ಇದೆ
ಪ್ರಶ್ನೆ 2: ಮೃತ ದೇಹದ ಮುಖದ ಬಣ್ಣ ಬದಲಾಗಿದೆ. ಇದಕ್ಕೆ ಕಾರಣವೇನು?
ಉತ್ತರ: ಮುಖ ಮತ್ತು ದೇಹದ ಬಣ್ಣ ಬದಲಾಗಲು ಆಮ್ಲಜನಕದ ಕೊರತೆ ಮತ್ತು ನೀರಿನಲ್ಲಿ ಗಂಟೆಗಳ ಕಾಲ ಮುಳುಗಿರುವುದೇ ಕಾರಣ
ಪ್ರಶ್ನೆ 3: ಉಗುರು, ಪಿನ್ ಅಥವಾ ಮೊನಚಾದ ಆಯುಧಗಳಿಂದ ಚುಚ್ಚಿದ ಗುರುತುಗಳು ಇವೆಯೇ?
ಉತ್ತರ: ದೇಹದ ಯಾವುದೇ ಭಾಗದಲ್ಲಿ ಉಗುರು, ಪಿನ್ ಅಥವಾ ಮೊನಚಾದ ಆಯುಧಗಳಿಂದ ಚುಚ್ಚಿದ ಗುರುತುಗಳಿಲ್ಲ.
ಪ್ರಶ್ನೆ 4: ದೇಹದಲ್ಲಿ ಟ್ಯಾಟೂ ಇತ್ತೇ?
ಉತ್ತರ: ಪರೇಶ್ ಕೈಯಲ್ಲಿ ಶಿವಾಜಿ ಟ್ಯಾಟೂ ಇತ್ತು. ಹತ್ಯೆಯಾದಾಗ ಆ ಚರ್ಮವನ್ನು ಕೀಳಲಾಗಿದೆ ಎಂದು ಆರೋಪಿಸಲಾಗಿತ್ತು, ಆದರೆ ಬಲ ಮುಂಗೈನಲ್ಲಿ 7 ಸೆಂಟಿಮೀಟರ್ ಉದ್ದದ ಶಿವಾಜಿ ಟ್ಯಾಟೂ ಮತ್ತು ಮರಾಠ ಎಂದು ಬರೆದಿರುವ ಚಿತ್ರಗಳು ಮೃತದೇಹದಲ್ಲಿ ಹಾಗೆಯೇ ಇದೆ.
ಪ್ರಶ್ನೆ 6: ದೇಹದಲ್ಲಿ ಟ್ಯಾಟೂ ಅಳಿಸಲಾಗಿತ್ತೇ?
ಉತ್ತರ: ಇಲ್ಲ
ಪ್ರಶ್ನೆ 7: ಮುಖದ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್ ನಿಂದ ದಾಳಿ ನಡೆದಿದೆಯೇ?
ಉತ್ತರ: ಮುಖದ ಮೇಲೆ ಬಿಸಿ ನೀರು ಅಥವಾ ಆ್ಯಸಿಡ್ ಹಾಕಿಲ್ಲ, ರಾಸಾಯನಿಕ ಪದಾರ್ಥದಿಂದ ದಾಳಿಯೂ ನಡೆದಿಲ್ಲ
ಪ್ರಶ್ನೆ 8: ಬಾಯಿಯಲ್ಲಿ ಪರರ ಮಲ/ ಮೂತ್ರ ಏನಾದರೂ ಪತ್ತೆಯಾಗಿತ್ತೆ?
ಉತ್ತರ: ಇಂಥದ್ದೇನೂ ಪತ್ತೆಯಾಗಿಲ್ಲ
ಪ್ರಶ್ನೆ 9 : ಮೃತ ವ್ಯಕ್ತಿಯ ಗುಪ್ತಾಂಗಗಳು ಸರಿಯಾದ ರೀತಿಯಲ್ಲಿ ಇತ್ತೇ? ಅಲ್ಲಿ ಹಲ್ಲೆ ಗುರುತುಗಳೇನಾದರೂ ಇದ್ದವೇ?
ಉತ್ತರ: ಶಿಶ್ನ ಮತ್ತು ವೃಷಣ ಸ್ವಲ್ಪ ವಿಚಲಿತವಾಗಿತ್ತು. ಆಮ್ಲಜನಕದ ಕೊರತೆ ಮತ್ತು ನೀರಿನಿಂದ ಮುಳುಗಿದ್ದ ಕಾರಣ ಹೀಗಾಗಿದೆ.
ಪ್ರಶ್ನೆ 10: ಮೃತ ದೇಹದ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದ ಗುರುತು ಇತ್ತೇ?
ಉತ್ತರ: ಹಗ್ಗದಿಂದ ಅಥವಾ ಇನ್ಯಾವುದೇ ವಸ್ತುವಿನಿಂದ ಕೈ ಕಾಲುಗಳನ್ನು ಬಿಗಿದಿರುವ ಗುರುತುಗಳಿಲ್ಲ
ಪ್ರಶ್ನೆ 11 : ಚರ್ಮದಲ್ಲಿ ನೀರಿನ ಗುಳ್ಳೆಗಳು ಎದ್ದಿತ್ತೇ? ಇದಕ್ಕೆ ಕಾರಣವೇನು?
ಉತ್ತರ: ನೀರಿನಲ್ಲಿ ಗಂಟೆಗಳ ಕಾಲ ನೆನೆದ ಕಾರಣಕ್ಕೆ ಈ ನೀರಿನ ಗುಳ್ಳೆಗಳಾಗಿವೆ,
ಪ್ರಶ್ನೆ 12 : ಕಿವಿಯ ಭಾಗದಲ್ಲಿ ಗಾಯಗಳಿತ್ತೇ ?
ಉತ್ತರ: ಇರಲಿಲ್ಲ
ಪ್ರಶ್ನೆ 13 : ದೇಹದಲ್ಲಿ ರಕ್ತದ ಕಲೆ ಇತ್ತೇ? ಇದ್ದಿದ್ದರೆ ಅದಕ್ಕೆ ಕಾರಣವೇನು?
ಉತ್ತರ: ದೇಹದಲ್ಲಿ ರಕ್ತದ ಕಲೆಗಳಿಲ್ಲ, ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಿದಂತೆ ಮರಣೋತ್ತರ ಪರೀಕ್ಷೆಯಿಂದಾಗಿ ಮೂಗಿನಲ್ಲಿ ಮತ್ತು ಬಾಯಿಯಲ್ಲಿ ದ್ರವ ಪತ್ತೆಯಾಗಿದೆ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರೆ ಹೀಗಾಗುವುದು ಸಾಮಾನ್ಯ
ಪ್ರಶ್ನೆ 14: ತಲೆಗೆ ಏಟು ಆಗಿತ್ತೇ?
ಉತ್ತರ: ಇಲ್ಲ
ಪ್ರಶ್ನೆ 15: ತಲೆಯಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತೇ?
ಉತ್ತರ: ಇಲ್ಲ
ಪ್ರಶ್ನೆ 16 : ಹಗ್ಗದಿಂದ ಕತ್ತು ಹಿಸುಕಿ ಕೊಲೆಗೈಯ್ಯಲಾಗಿದೆ ಎಂಬುದಕ್ಕೆ ಏನಾದರೂ ಸಾಕ್ಷ್ಯವಿದೆಯೇ?
ಉತ್ತರ:ಅಂಥದ್ದೇನೂ ಇಲ್ಲ
ಪ್ರಶ್ನೆ 17: ಪೃಷ್ಠ ಭಾಗಕ್ಕೆ ಹಲ್ಲೆ ನಡೆಸಿದ ಗುರುತು ಇದೆಯೇ?
ಉತ್ತರ:ಇಲ್ಲ
ಪ್ರಶ್ನೆ 18: ಮೃತದೇಹದ ಬೆರಳು ಮತ್ತು ಉಗುರುಗಳು ಯಥಾಸ್ಥಿತಿಯಲ್ಲಿತ್ತೇ?
ಉತ್ತರ: ಹೌದು. ಅವು ಯಥಾಸ್ಥಿತಿಯಲ್ಲಿ ಇತ್ತು
ಪ್ರಶ್ನೆ 19: ಉದರ ಪರೀಕ್ಷೆ ಮಾಡಿದಾಗ ಪರೇಶ ಹಸಿವಿನಿಂದ ಬಳಲಿದ್ದ ಎಂಬುದಕ್ಕೆ ಏನಾದರೂ ಸಾಕ್ಷ್ಯ ಸಿಕ್ಕಿತ್ತೇ?
ಉತ್ತರ: ಉದರ ಪರೀಕ್ಷೆ ಮಾಡಿದಾಗ ಪರೇಶ ಸಾಯುವ ಮುನ್ನ ಹಸಿವಿನಿಂದ ಬಳಲಿಲ್ಲ ಎಂಬುದು ಪತ್ತೆಯಾಗಿದೆ.

report 1report 2report 3

 

Read 29 times

Recent Videos

Category: Religious
Views: 138
Category: Religious
Views: 75
Category: Religious
Views: 38