Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಸೈಂಟ್ ಮೇರಿಸ್ ದ್ವೀಪದಲ್ಲಿ ಯುವಕ ಬಲಿ

ಸೈಂಟ್ ಮೇರಿಸ್ ದ್ವೀಪದಲ್ಲಿ ಯುವಕ ಬಲಿ


ಉಡುಪಿ: 01 Feb(Fikrokhabar./sources)ಸೈಂಟ್ ಮೇರೀಸ್ ದ್ವೀಪದಲ್ಲಿ ಬಂಡೆಗಲ್ಲಿನ ಮೇಲೆ ಕೂತು ಕಡಲಿನ ಅಲೆಗಳನ್ನು ವೀಕ್ಷಿಸುತ್ತಿದ್ದ ಪಾಂಡಿಚೇರಿಯ ವಿವೇಕಾನಂದ ನಾರಾಯಣ ಸ್ವಾಮಿ(26) ಎಂಬವರು ದೈತ್ಯ ಅಲೆಯೊಂದು ಅಪ್ಪಳಿಸಿದ ರಭಸಕ್ಕೆ ಕಡಲಿನಾಳಕ್ಕೆ ಸೆಳೆಯಲ್ಪಟ್ಟು ನೀರಿನಲ್ಲಿ ಮುಳುಗಿ ಸಾವಪ್ಪಿದ ಖೇದಕರ ಘಟನೆ ವರದಿಯಾಗಿದೆ.


ವಿವೇಕಾನಂದ ಅವರು ಬೆಂಗಳೂರಿನ ವಿಪ್ರೊ ಸಾಫ್ಟ್‌ವೇರ್ ಸಂಸ್ಥೆ ಉದ್ಯೋಗಿಯಾಗಿದ್ದರು. ಗೆಳೆಯರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ನಾಲ್ವರು ನಗರಕ್ಕೆ ಬಂದಿದ್ದ ವಿವೇಕಾನಂದ ಮದುವೆ ಬಳಿಕ ಸೈಂಟ್ ಮೇರಿಸ್ ದ್ವೀಪಕ್ಕೆ ಭೇಟಿ ಕೊಟ್ಟಿದ್ದರು. ದ್ವೀಪ ಪರ್ಯಟನೆ ಬಳಿಕ ಗೆಳೆಯ ಮಣಿಕಂಠ ಎಂಬವರೊಂದಿಗೆ ಬಂಡೆಗಲ್ಲಿನ ಮೇಲೆ ಕೂತು ಮಾತಾಡುತ್ತಿದ್ದಾಗ ಅಲೆಯೊಂದು ಇದ್ದಕ್ಕಿದ್ದಂತೆ ಅಪ್ಪಳಿಸಿತ್ತು. ವಿವೇಕಾನಂದ ಮತ್ತು ಗೆಳೆಯ ಮಣಿಕಂಠ ಇಬ್ಬರೂ ನೀರಿನಾಳಕ್ಕೆ ಸೆಳೆಯಲ್ಪಟ್ಟಿದ್ದರೂ ಈಜಲು ತಿಳಿದಿದ್ದ ಮಣಿಕಂಠ ಸಾಹಸದಿಂದ ಈಜಿ ದಡ ಸೇರಿದ್ದಾರೆ. ಈಜಲು ಅರಿಯದ ವಿವೇಕಾನಂದ ಅವರ ಬದುಕು ಮುಗಿದಿದೆ.

ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದ್ದು, ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read 47 times

Recent Videos

Category: Religious
Views: 145
Category: Religious
Views: 77
Category: Religious
Views: 42