Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಗೋರಿ ಹಾನಿ: ಬಜರಂಗಿಗಳ ಸೆರೆ

ಗೋರಿ ಹಾನಿ: ಬಜರಂಗಿಗಳ ಸೆರೆ


ಕಾರ್ಕಳ: 01 Feb(Fikrokhabar./sources) ನಗರದ ಪರ್ಪಲೆ ಗುಡ್ಡೆಯ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಅನಧಿಕೃತವಾಗಿ ನಿರ್ಮಿಸಿದ ಮಣ್ಣಿನ ಗೋರಿಯನ್ನು ಹಾನಿಗೊಳಿಸಿ ಅದಕ್ಕೆ ಹಾಕಲಾಗಿದ್ದ ವಸ್ತ್ರಗಳಿಗೆ ಬೆಂಕಿ ಹಂಚಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಆರೋಪದ ಹಿನ್ನೆಲೆಯಲ್ಲಿ ಮೂವರು ಭಜರಂಗಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ನಗರ ಭಜರಂಗದಳ ಘಟಕದ ಅಧ್ಯಕ್ಷ ಅನಿಲ್ಪ್ರಭು, ನಿಟ್ಟೆ ಪರಪ್ಪಾಡಿಯ ಅತ್ಮಾನಂದ, ಗುಂಡಾಜೆಯ ಅಕ್ಷಯ್ ಬಂಧಿತರು. ಇತರ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.


ಯಾವುದೇ ಧಾರ್ಮಿಕ ಹಿನ್ನಲ್ಲೆ ಇರದಂತಹ ಈ ಜಾಗದಲ್ಲಿ ಕಳೆದ 20 ವರ್ಷಗಳಿಂದ ಸಮುದಾಯವೊಂದರ ಜನರು ಪರ್ಪಲೆ ಪರಿಸರದಲ್ಲಿ ಬೀಡು ಬಿಟ್ಟು ಅಡುಗೆ ತಯಾರಿಸಿ ಅದನ್ನು ಸೇವನೆಗೈದು ಯಾತ್ರೆ ಮುಂದುವರಿಸುತ್ತಿದ್ದರು. ಇಂತಹ ಪರಿಪಾಠ ಮೂಂದುವರಿಯುತ್ತಾ ಅದರ ಪರಿಸರದಲ್ಲಿ ಗೋರಿ ನಿರ್ಮಾಣ ಕಂಡುಬಂದಿತ್ತು. ಅದಕ್ಕೆ ಪ್ರಾರ್ಥನೆ ಸಲ್ಲಿಸುವುದನ್ನು ಮುಂದುವರಿಸಿದ್ದರು. ಕಳೆದ ಕೆಲ ತಿಂಗಳುಗಳಿಂದ ಆ ಗೋರಿಗೆ ಧಾರ್ಮಿಕ ಆಚರಣೆಯಲ್ಲಿ ಬಳಸಲಾಗುವ ವಸ್ತ್ರಗಳ ಹೊಂದಿಕೆ ಮಾಡುತ್ತಿರುವುದು ಈ ಎಲ್ಲಾ ವಿವಾದಕ್ಕೆ ಮತ್ತೊಮ್ಮೆ ನಾಂದಿಯಾಗಿದೆ.

ಮಾಹಿತಿ ತಿಳಿದ ಭಜರಂಗಿಗಳು ಘಟನಾ ಸ್ಥಳಕ್ಕೆ ತೆರಳಿ ಗೋರಿಯ ಮೇಲೆ ಚಪ್ಪಲಿ ಇರಿಸಿ, ವಸ್ತ್ರಗಳಿಗೆ ಬೆಂಕಿ ಹಚ್ಚುವ ದೃಶ್ಯಾವಳಿ ಮೊಬೈಲ್ಗಳಲ್ಲಿ ಸೆರೆ ಹಿಡಿದರು ಅದನ್ನು ತಮ್ಮವರಿಗೆ ಶೇರ್ ಮಾಡಿರುವುದರಿಂದ ಪ್ರಕರಣ ಬಯಲಿಗೆ ಬರಲು ಕಾರಣವಾಗಿದೆ.

Read 70 times

Recent Videos

Category: Religious
Views: 122
Category: Religious
Views: 63
Category: Religious
Views: 33